ಉಡುಪಿ ಕೆಥೊಲಿಕ್ ಕೊ -ಆ.ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಲೂಯಿಸ್ ಲೋಬೊ ಆಯ್ಕೆ
ಉಡುಪಿ: ಉಡುಪಿ ಕೆಥೊಲಿಕ್ ಕೊ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಲೂಯಿಸ್ ಲೋಬೊ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಲೂಯಿಸ್ ಅಲ್ಮೇಡಾ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಆಯ್ಕೆ ನಡೆದಿದೆ.
ಜ. 24ರಂದು ಚುನಾವಣಾಧಿಕಾರಿ ಕೆ. ಆರ್. ರೋಹಿತ್ ಅವರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಲೂಯಿಸ್ ಲೋಬೊ ಅವರನ್ನು ಆಡಳಿತ ಮಂಡಳಿಯ ಉಳಿದ ಅವಧಿಯವರೆಗೆ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ (ಪ್ರಭಾರ) ಜೇಮ್ಸ್ ಡಿ’ಸೋಜ ಅವರನ್ನು ಆಯ್ಕೆ ಮಾಡಲಾಗಿದೆ. ಲೋಬೊ ಅವರು 15 ವರ್ಷಗಳ ಕಾಲ ಸಂಘದ ನಿರ್ದೇಶಕರಾಗಿ, ಬಳಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. IFKCA ಉಡುಪಿ ಜಿಲ್ಲಾ ಘಟಕದ ಸ್ಥಾಪಕಾಧ್ಯಕ್ಷರಾದ ಲೊಬೊ ಅವರು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ ನಿರ್ದೇಶಕರಾಗಿದ್ದಾರೆ.