ಮಂಗಳೂರು: ಆರ್’ಸಿಬಿ ತಂಡಕ್ಕೆ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಪಾಲುದಾರ
ಮಂಗಳೂರು, ಜ 27: ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್ಸಿಬಿ) ತಂಡದ ಅಧಿಕೃತ ಐಸ್ಕ್ರೀಂ ಪಾಲುದಾರನಾಗಿ ಕರಾವಳಿ ಕರ್ನಾಟಕದ ಹೆಸರಾಂತ, ಜನಮೆಚ್ಚಿದ ಹಾಂಗ್ಯೊ ಐಸ್ಕ್ರೀಂ ಸೇರ್ಪಡೆಗೊಂಡಿದೆ.
ಐಪಿಎಲ್ 2024ನೇ ಆವೃತ್ತಿ ಪ್ರಾರಂಭವಾಗುತ್ತಿದ್ದು, ಈ ಭಾರಿ ಆರ್ಸಿಬಿ ತಂಡಕ್ಕೆ ಹಾಂಗ್ಯೊ ಐಸ್ಕ್ರೀಂ ಸಾಥ್ ನೀಡಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಎರಡೂ ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ್ದು, ಈ ಮೂಲಕ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಅಧಿಕೃತವಾಗಿ ಪಾಲುದಾರ ಸಂಸ್ಥೆಯಾಗಿದೆ. ಆರ್ಸಿಬಿಯೊಂದಿಗೆ ರೋಮಾಂಚಕ ಪಯಣ ಪ್ರಾರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ.
ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್ಕ್ರೀಂನ ಆಹ್ಲಾದಕರ ಐಸ್ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಹಾಂಗ್ಯೋ ಐಸ್ಕ್ರೀಮ್ಸ್ ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ.