ಮಣಿಪಾಲ: ಡ್ರಗ್ಸ್ ಪಾರ್ಸೆಲ್ ಹೆಸರಲ್ಲಿ ವ್ಯಕ್ತಿಗೆ 9.83 ಲಕ್ಷ ರೂ. ವಂಚನೆ
ಮಣಿಪಾಲ ಜ.26(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರಿಗೆ ತಮ್ಮ ಹೆಸರಿನಲ್ಲಿ ಕಾನೂನು ಬಾಹೀರವಾದ ವಸ್ತುಗಳನ್ನು ಹೊಂದಿರುವ ಪಾರ್ಸೆಲ್ ಇರುವುದಾಗಿ ನಂಬಿಸಿ ಬ್ಯಾಂಕ್ ಖಾತೆಯ ದಾಖಲೆಗಳನ್ನು ಪಡೆದು 9.83 ಲಕ್ಷ ರೂ. ದೋಚಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿಪಾಲದ ಲಕ್ಷ್ಮೀಂದ್ರ ನಗರ ನಿವಾಸಿ ಆಂಜನೆಯ ಪ್ರಸಾದ ಕುಮಾರ್ ಎಂಬವರಿಗೆ ಜ.24 ರಂದು ಸಂಜೆ ವೇಳೆ ಫೆಡೆಕ್ಸ್ ಎಕ್ಸಿಕ್ಯೂಟಿವ್ ನಿಂದ ಎಂದು ಹೇಳಿಕೊಂಡು ಹರ್ಷವರ್ದನ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಕರೆ ಮಾಡಿದ್ದ, ಹಾಗೂ ಆತ ಆಂಜನೆಯ ಪ್ರಸಾದ ಕುಮಾರ್ ಅವರಿಗೆ ತಮ್ಮ ಹೆಸರಿನಲ್ಲಿ ಕಾನೂನು ಬಾಹೀರ ವಸ್ತುಗಳಾದ ಅವಧಿ ಮುಗಿದಿರುವ 5 ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ಗಳು, ಬಟ್ಟೆಗಳು ಹಾಗೂ ಎಂಡಿಎಂಎ ಡ್ರಗ್ಸ್ ಇರುವ ಪಾರ್ಸೆಲ್ವೊಂದು ಇರುವುದಾಗಿ ಸುಳ್ಳು ಮಾಹಿತಿ ನೀಡಿದ್ದು, ಮಾತ್ರವಲ್ಲದೆ ಈ ಬಗ್ಗೆ ಮನಿ ಲಾಂಡ್ರಿಂಗ್ ಡಿಪಾರ್ಟಮೆಂಟ್ ಮುಂಬೈ ಪೊಲೀಸ್ ರವರಿಗೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾನೆ.
ಆ ಬಳಿಕ ಸ್ಕೈಪ್ ಆ್ಯಪ್ ಮೂಲಕ ಮುಂಬೈ ಪೊಲೀಸ್ ಎಂದು ಅಪರಿಚಿತ ವ್ಯಕ್ತಿಯೊಂದಿಗೆ ವಿಡಿಯೋ ಕರೆ ಮಾಡಿ ತಮ್ಮ ಬ್ಯಾಂಕ್ ಸಂಬಂದಿಸಿದ ಎಲ್ಲಾ ದಾಖಲಾತಿಗಳನ್ನು ಪಡೆದು ಒಟ್ಟು 9,83,500 ರೂ. ಹಣವನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾಹಿಸಿ ಕೊಂಡು ವಂಚಿಸಿದ್ದಾರೆ ಎಂಬುದಾಗಿ ಆಂಜನೆಯ ಪ್ರಸಾದ ಕುಮಾರ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.