ಉಡುಪಿ ಹೊಟೇಲ್ ಕಿದಿಯೂರು: ತೃತೀಯ “ಅಷ್ಟಪವಿತ್ರ ನಾಗ ಮಂಡಲೋತ್ಸವಕ್ಕೆ” ವಿದ್ಯುಕ್ತ ಚಾಲನೆ
ಉಡುಪಿ: ಹೊಟೇಲ್ ಕಿದಿಯೂರಿನಲ್ಲಿ ಜ.26 ರ ಶುಕ್ರವಾರದಿಂದ ಆರು ದಿನಗಳ ಕಾಲ ತೃತೀಯ “ಅಷ್ಟ ಪವಿತ್ರ ನಾಗಮಂಡಲೋತ್ಸವ”ದ ಪ್ರಯುಕ್ತ ಜರಗಲಿರುವ ವಿವಿಧ ಧಾರ್ಮಿಕ ವಿಧಿ-ವಿಧಾನ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆಯನ್ನು ನೀಡಲಾಯಿತು.
ಹೊಟೇಲ್ ಆವರಣದಲ್ಲಿರುವ ಕಾರಣಿಕ ಶ್ರೀನಾಗ ಸನ್ನಿಧಿಯಲ್ಲಿ ಜ್ಯೋತಿಷ್ಯ ರತ್ನ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯರವರ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ಫಲನ್ಯಾಸ, ಪುಣ್ಯಾಹ, ದೇವನಾಂದಿ, ಮಹಾಸಂಕಲ್ಪ, ದ್ವಾದಶ ನಾರಿಕೇಳಗಣಯಾಗ, ಶ್ರೀನಾಗ ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ಮಹಾಪೂಜೆ, ಉಗ್ರಾಣ ಮುಹೂರ್ತ, ಪಾಕಶಾಲಾಮುಹೂರ್ತ, ಪಾಕಶಾಲೆಯಲ್ಲಿ ಶ್ರೀಸೂಕ್ತ ಹವನ ಕಾರ್ಯಕ್ರಮ ಸಾಯಂಕಾಲ ಪ್ರಾಸಾದ ಶುದ್ಧಿ, ಭೂವರಾಹ ಹೋಮ, ಆಶ್ಲೇಷಾಬಲಿ, ತನುತರ್ಪಣ, ಶ್ರೀನಾಗ ದೇವರಿಗೆ ರಾತ್ರೆಪೂಜೆಯನ್ನು ನೆರವೇರಿಸಲಾಯಿತು.
ಬಳಿಕ ಶ್ರೀವಿಶ್ವೇಶ ತೀರ್ಥ ವೇದಿಕೆಯಲ್ಲಿ ಬೆಳಿಗ್ಗೆಯಿಂದ ನಡೆಸಲಾದ ಭಜನಾ ಕಾರ್ಯಕ್ರಮವನ್ನು ದಕ್ಷಿಣಕನ್ನಡ ಮಹಾಜನ ಮೊಗವೀರ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ರವರು ಜ್ಯೋತಿಯನ್ನು ಬೆಳಕಿಸುವುದರೊಂದಿಗೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹೊಟೇಲ್ ಮಾಲಕರಾದ ಭುವನೇಂದ್ರ ಕಿದಿಯೂರು, ಹೀರಾ ಬಿ ಕಿದಿಯೂರು, ಜಿತೇಶ್ ಕಿದಿಯೂರು, ಶ್ರೀಪ್ರಿಯಾಂಕ ಜಿತೇಶ್ ಕಿದಿಯೂರು, ಡಾ.ಭವ್ಯಶ್ರೀ, ಅಭಿನ್ ಕಿದಿಯೂರು, ಡಾ. ಅಭಿನ್ ದೇವದಾಸ್ ಶ್ರೀಯಾನ್, ಯಜ್ಞೇಶ್ ಬಿ ಕಿದಿಯೂರು, ಶಿಲ್ಪಾ ಯಜ್ಞೇಶ್, ಗಣೇಶ್ ರಾವ್, ಪುಷ್ಪಾಗಣೇಶ್ ರಾವ್, ಹಿರಿಯಣ್ಣ ಕಿದಿಯೂರು, ಭೋಜರಾಜ್ ಆರ್ ಕಿದಿಯೂರು, ಮ೦ಡಲೋತ್ಸವದ ಪ್ರಧಾನ ಕಾರ್ಯದರ್ಶಿ ಯುವರಾಜ್ ಮಸ್ಕತ್, ಕೋಶಾಧಿಕಾರಿ ವಿಲಾಸ್ ಕುಮಾರ್, ಮಂಡಲೋತ್ಸವ ದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.