ನಾರಾಯಣ ಗುರುಗಳ ತತ್ವ ದೇಶದ ಅಭಿವೃದ್ಧಿಗೆ ದಾರಿದೀಪ: ಪ್ರವೀಣ್ ಪೂಜಾರಿ
ಉಡುಪಿ: ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಾದರೆ ಮತ್ತು ನಮ್ಮ ದೇಶ ಅಭಿವೃದ್ದಿಗೆ ಪೂರಕವಾಗಿ ಸಮಾಜದಲ್ಲಿ ಐಕ್ಯತೆ ಇದ್ದರೆ ಮಾತ್ರ ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಯುವ ನ್ಯಾಯವಾದಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ.ಪೂಜಾರಿ ಅಭಿಪ್ರಾಯಪಟ್ಟರು.
ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಉದ್ಯಾವರ ಕಚೇರಿಯಲ್ಲಿ ಶುಕ್ರವಾರ ಧ್ವಜ ಅನಾವರಣ ಸಮಾರಂಭವನ್ನು ಉದ್ದೇಶಿಸಿ ಮಾತಾಡಿದ ಇವರು ನಮ್ಮ ನಡುವೆ ಐಕ್ಯತೆ ಮೂಡಲು ಎಲ್ಲಾ ಯುವಕರು ಶ್ರೀನಾರಾಯಣ ಗುರುಗಳ ಒಂದೇ ಮತ, ಒಂದೇ ಧರ್ಮ, ಒಂದೇ ದೇವರು ಎಂಬ ವೇದ ವಾಕ್ಯವನ್ನು ಪಾಲಿಸಿದಲ್ಲಿ ಈ ದೇಶ ಬಲಿಷ್ಠ ರಾಷ್ಟ್ರ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯ ಇಲ್ಲ ಎಂದರು.
ಅದೇ ರೀತಿ ಎಲ್ಲ ಬಿಲ್ಲವ ಸಂಘ, ಬಿಲ್ಲವ ಭಜನಾ ಮಂದಿರ,ನಾರಾಯಣಗುರು ಸೇವಾಕೇಂದ್ರ ಮುಂತಾದ ಎಲ್ಲ ಸಂಘ ಸಂಸ್ಥೆ, ಮಂದಿರಗಳಲ್ಲಿ ಶ್ರೀ ನಾರಾಯಣ ಗುರು ಸಂದೇಶದ ಪ್ರಕಾರ ಹಳದಿ ಧ್ವಜ ರಾರಾಜಿಸ ಬೇಕು ಎಂಬ ಸಂದೇಶವನ್ನು ನೀಡಿದರು
ಈ ಸಂದರ್ಭದಲ್ಲಿ ಶ್ರೀನಾರಾಯಣ ಗುರು ಯುವ ವೇದಿಕೆ, ಉಡುಪಿ ಇದರ ಗೌರವ ಅಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷ ಮಿಥುನ್ ಅಮೀನ್, ಗಿರೀಶ್ ಕುಮಾರ್, ಸುನಿಲ್ ಪೂಜಾರಿ ಮಲ್ಪೆ, ಪ್ರಶಾಂತ್ ಪೂಜಾರಿ ಅಂಬಾಗಿಲು, ಶಬರೀಶ್ ಅಲೆವೂರು, ಪ್ರವೀಣ್ ಕೊಡವೂರು, ದಿವಾಕರ್ ಬೊಳ್ಜೆ, ಅಶೋಕ್ ಬಂಗೇರ, ಪ್ರಸನ್ನ ಪೂಜಾರಿ, ಸಚಿನ್ ಸಾಲ್ಯಾನ್, ಸುಪ್ರೀತ್ ಸುವರ್ಣ, ಸಂದೇಶ ಪೂಜಾರಿ, ಕಿಶೋರ್ ಪೂಜಾರಿ, ಲಕ್ಷ್ಮಣ್ ಸನಿಲ್, ಸುಧಾಕರ್ ಪೂಜಾರಿ, ನವೀನ್ ಪೂಜಾರಿ, ದಿನೇಶ್ ಪೂಜಾರಿ, ದೇವು ಪೂಜಾರಿ, ಸೌಹಾರ್ದ ಸಮಿತಿ ಉದ್ಯಾವರ ಇದರ ಅಧ್ಯಕ್ಷರಾದ ರಾಯ್ಸ್ ಫರ್ನಾಂಡಿಸ್, ಸ್ಟೀವನ್ ಕುಲಾಸೋ, ಮೋಹನ್ ಸೋನ್ಸ್, ಉದಯ್ ಪಿತ್ರೊಡಿ, ಪ್ರಕಾಶ್ ಬಂಗೇರ, ಸುದೇಶ್ ಬಲಾಯಿಪಾದೆ ಮುಂತಾದವರು ಉಪಸ್ಥಿತಿದ್ದರು.