ಸಂವಿಧಾನ ಇರುವವರೆಗೆ ಹಿಂದೂ ರಾಷ್ಟ್ರ ಅಸಾಧ್ಯ: ಜಯನ್ ಮಲ್ಪೆ
ಮಲ್ಪೆ: ಆರೆಸ್ಸೆಸ್ ಮತ್ತು ಬಿಜೆಪಿ ಒಳಗೊಂಡಂತೆ ಅದರ ಸಹ ಸಂಘಟನೆಗಳ ಫ್ಯಾಸಿಸ್ಟ್ ದೋರಣೆಯಾದ ಹಿಂದೂರಾಷ್ಟçದ ಕಲ್ಪನೆ ಭಾರತದಲ್ಲಿ ಸಂವಿಧಾನ ಇರುವವರೆಗೆ ಅಸಾಧ್ಯವೆಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಇಂದು ಮಲ್ಪೆ ಕಡಲ ಕಿನಾರೆಯ ಗಾಂಧಿ ಪ್ರತಿಮೆ ಎದುರು ಗಣರಾಜೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಮಾನತೆ, ಸ್ವಾತಂತ್ರ್ಯ, ಸಹೋದರತೆಯನ್ನು ಭೋದಿಸುವ ಭಾರತದ ಜಾತ್ಯಾತೀತ ಸಂವಿಧಾನವನ್ನು ಬುಡಮೇಲು ಮಾಡುವ ಸಂಘಪರಿವಾರದ ಹಿಂದುತ್ವದ ವಿರುದ್ಧ ದಲಿತತ್ವ ಹೋರಾಟ ನಡೆಸುವುದು ಅನಿವಾರ್ಯ ಎಂದರು.
ಸಂವಿಧಾನದ ಒಳಗಿರುವ ರಕ್ಷಣೆಗಳನ್ನು ಮರೆತರೆ ನಮ್ಮ ಮೈಮೇಲೆ ಬಟ್ಟೆಗೂ ಗತಿಯಿಲ್ಲದ ಪರಿಸ್ಥಿತಿ ಬರಬಹುದು,ಸಂವಿಧಾನ ಮರೆತರ ನಮ್ಮ ಮನೆ ಕತ್ತಲಾಗುವುದು ಎಂದ ಜಯನ್ ಮಲ್ಪೆ ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳೇ ದಲಿತರ ಬದುಕುಗೆ ಗ್ಯಾರಂಟಿ ಎಂದುರು. ಮಲ್ಪೆ ಬಂಜಾರು ಮೀನುಗಾರರ ಸಂಘದ ಅಧ್ಯಕ್ಷರಾದ ಮಂಜುನಾಥ ಅಂಬೇಡ್ಕರ್ ಭಾವಚಿತ್ರಕ್ಕೆ ಹೂವುಹಾರಹಾಕಿ ಉದ್ಘಾಟಿಸಿದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಮಾತನಾಡಿ ಸಂವಿಧಾನವನ್ನು ಉಳಿಸುವ ಕರ್ತವ್ಯ ಇಂದಿನ ಯುವಜನಾಂದ ಕೈಯಲ್ಲಿದೆ. ಜನರನ್ನು ಬಾಧಿಸುತ್ತಿರುವ ಆರ್ಥಿಕ,ಸಮಾಜಿಕ ಸಮಸ್ಯೆಗಳನ್ನು ಮರೆಮಾಚಿ ಅಯೋಧ್ಯೆಯಲ್ಲಿ ರಾಮ ಮಂದಿರ, ಏಕರೂಪ ನಾಗರಿಕ ಸಂಹಿತೆ,ಹುಟ್ಟುಹಾಕಿ ನಿಧಾನವಾಗಿ ಸಂವಿಧಾನದ ಸೆರಗಿಗೆ ಕೈಹಾಕುವ ಸಂಚು ನಡೆಯುತ್ತಿದೆ ಎಂದರು.
ಇಂಜಿನಿಯರ್ ರಮೇಶ್ ಪಾಲ್ ಮಾತನಾಡಿ ಸಂವಿಧಾನದ ಮೂಲಕ ನಾವು ಅನೇಕ ವೈರುಧ್ಯಗಳನ್ನೊಳಗೊಂಡ ಜೀವನವನ್ನು ಪ್ರವೇಶಿಸಿದ್ದೇವೆ. ರಾಜಕೀಯವಾಗಿ ನಮಗೆ ಸಮಾನತೆ ಇರುತ್ತದೆ,ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆ ಮುಂದುವರಿದಿದೆ ಎಂದರು. ದಲಿತ ಮುಖಂಡ ಲೋಕೇಶ್ ಪಡುಬಿದ್ರಿ ಮಾತನಾಡಿ ಮಾಧ್ಯಮ ಪ್ರಜಾತಂತ್ರ ವ್ಯವಸ್ಥೆ ಕಾಪಾಡುವ ಒಂದು ಪ್ರಭಲ ಅಸ್ರ ಮತ್ತು ಅಂಗ. ಸಂವಿಧಾನದತ್ತ ಮೂಲಭೂತ ಮತ್ತು ನಾಗರಿಕ ಹಕ್ಕುಗಳನ್ನು ಸರಾಸಗಟಾಗಿ ಹರಣಮಾಡುತ್ತಿರುವ ಈ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸದಿರುವುದು ದೌರ್ಭಾಗ್ಯ ಎಂದರು. ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಸೋಲಿಸಿ,ನಮ್ಮ ದೇಶವನ್ನು ಜಗತ್ತಿನಲ್ಲೆ ಅತ್ಯಂತ ಬಡ ಬಿಕ್ಷಕ ದೇಶವನ್ನಾಗಿ ಮಾಡಿದ್ದಾರೆ.ಅತ್ಯಂತ ಶ್ರೀಮಂತ ನಿಸರ್ಗ ಹಾಗೂ ಮಾನವ ಸಂಪನ್ಮೂಲಗಳನ್ನು ಹೊಂದಿರುವ ಈ ನಾಡನ್ನು ಸುಖೀರಾಜ್ಯವನ್ನಾಗಿ ಪರಿವರ್ತಿಸಬೇಕಾದರೆ ದಲಿತರು ಈ ದೇಶದ ಅಧಿಕಾರವನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದರು.
ಮೀನುಗಾರ ಸಮಾಜದ ಸುದರ್ಶನ್ ಪಡುಕರೆ, ಮಹೇಶ ಕೋಟ್ಯಾನ್, ತಾರನಾಥ ಬೀಚ್, ಪಾಂಡುರಂಗ ಬಂಕೇರ್‌ಕಟ್ಟ, ಸತೀಶ್ ಕಲ್ಮಾಡಿ, ಸಂದೀಪ್ ಮಲ್ಪೆ,ನಾರಾಯಣ ಕಲ್ಮಾಡಿ,ವಿನಯ ಬಲರಾಮನಗರ, ಮಾಂತೇಶ್, ರಾಜೇಶ್, ಪಂಪಾಪತಿ, ಮಂಜುನಾಥ ಚೌಹಾನ್,ದಲಿತ ಮುಖಂಡರಾದ ಹರೀಶ್ ಸಲ್ಯಾನ್,ದಯಾಕರ್ ಮಲ್ಪೆ,ಸಂತೋಷ್ ಕಪ್ಪೆಟ್ಟು,ಗುಣವಂತ, ಸುಮಿತ್ ನೆರ್ಗಿ, ರವಿ ಲಕ್ಷ್ಮೀ ನಗರ, ಪುನೀತ್ ಕದಿಕೆ,ಸುಕೇಶ್ ಪುತ್ತೂರು, ಸಾಧು ಚಿಟ್ಪಾಡಿ, ಮಂಜುನಾಥ ನಾಯ್ಕ, ಮಾಧವ ಕರ್ಕೆರ, ವಸಂತ ಅಂಬಲಪಾಡಿ,ವಿನಯ ಕೊಡಂಕೂರು,ಈಶ್ವರ ಗದಗ್, ಸುರೇಶ್ ಪಾಲನ್,ಪ್ರಶಾಂತ್ ಬಿ.ಎನ್, ಅಶೋಕ್ ಪುತ್ತೂರು,ಶುಶಿಲ್ ಕುಮಾರ್, ದೀಪಕ್, ಪುನೀತ್ ಕದಿಕೆ,ಸುರೇಶ್ ಚಿಟ್ಪಾಡಿ,ಅರುಣ ಲಕ್ಮ್ಮೀ ನಗರ, ಜಯ ಸಾಲ್ಯಾನ್, ಸುಶೀಲ್ ಜಿ, ನಾರಾಯಣ ಬೀಚ್, ರಾಮ ನೆರ್ಗಿ, ಸಂತೋಷ್, ಪುಟ್ಟ, ಗೀತಾ ಬಲರಾಮನಗರ, ಅರುಣ ನೆರ್ಗಿ, ವಿಜಯ ನಿಟ್ಟೂರು ಮುಂತಾದವರು ಭಾಗವಹಿಸಿದ್ದರು. ಪ್ರಸಾದ್ ನೆರ್ಗಿ ಸ್ವಾಗತಿಸಿ, ಕೃಷ್ಣಶ್ರೀಯಾನ್ ವಂದಿಸಿದರು.