ಕಾತ್ಯಾಯಿನಿ ಕುಂಜಿಬೆಟ್ಟು ಅವರ ಎರಡು ಪುಸ್ತಕಗಳ ಬಿಡುಗಡೆ
ಉಡುಪಿ: ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಕ್ಷತ್ರ ನಕ್ಕ ರಾತ್ರಿ’ ಎಂಬ ಕವನ ಸಂಕಲನ ಹಾಗೂ ‘ಇರವಿನ ಅರಿವು’ ಎಂಬ ವಿಮರ್ಶಾ ಸಂಕಲನ ಪುಸ್ತಕಗಳನ್ನು ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಉಡುಪಿಯ ಅಜ್ಜರಕಾಡಿನ ಪಾರ್ಕ್ ಬಳಿ ಇರುವ ಐತಿಹಾಸಿಕ ಸ್ಥಳ ರೇಡಿಯೋ ಟವರ್ ಬಳಿಯಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ಧ ಜಾದೂ ಕಲಾವಿದರಾದ ಪ್ರೊ. ಶಂಕರ್, ಲೇಖಕಿ ಪೂರ್ಣಿಮಾ ಜನಾರ್ಧನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ನಾಗರಾಜ್ ಹೆಬ್ಬಾರ್, ಸ್ಮಿತಾ ಕಾಯ್ಕಿಣಿ, ನಿರೂಪಕ ಅವಿನಾಶ್ ಕಾಮತ್, ಕಲಾವಿದೆ ಪದ್ಮಾಸಿನಿ ಉದ್ಯಾವರ, ರಾಘವೇಂದ್ರ ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.