ಕಥೋಲಿಕ್ ಸಭಾ ಉದ್ಯಾವರ: ನೂತನ ಅಧ್ಯಕ್ಷರಾಗಿ ಐರಿನ್ ಪಿರೇರ ಆಯ್ಕೆ
ಉಡುಪಿ: ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವ್ಯಾಪ್ತಿಯ ಕಥೊಲಿಕ್ ಸಭಾ-ಉದ್ಯಾವರ ಘಟಕದ 2024-2025ನೇ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆ ಮತ್ತು ವಾರ್ಷಿಕ ಮಹಾಸಭೆ ಇತ್ತೀಚಿಗೆ ದೇವಾಲಯದ ಸಭಾಭವನದಲ್ಲಿ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಲೆಸ್ಲಿ ಕರ್ನೆಲಿಯೋ ಉಡುಪಿ ಮತ್ತು ಚುನಾವಣಾ ವೀಕ್ಷಕಿಯಾಗಿ ಲೊಯ್ಸೆಟ್ ಕರ್ನೆಲಿಯೋ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಫಾ.ಸ್ಟ್ಯಾನಿ ಬಿ. ಲೋಬೊ ಉಪಸ್ಥಿತರಿದ್ದರು.
ಆಯ್ಕೆಯಾದ ಕಾರ್ಯಕಾರಿ ಸಮಿತಿ ಹೀಗಿದೆ : ಅಧ್ಯಕ್ಷೆಯಾಗಿ ಐರಿನ್ ಪಿರೇರಾ, ಕಾರ್ಯದರ್ಶಿ ರೋಬರ್ಟ್ ಡಿಸೋಜ, ನಿಯೋಜಿತ ಅದ್ಯಕ್ಷ ಸ್ಟೀವನ್ ಲುವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಆಂದ್ರಾದೆ, ಉಪಾಧ್ಯಕ್ಷರಾಗಿ ಎಡ್ವಿನ್ ಲುವಿಸ್, ಜೊತೆ ಕಾರ್ಯದರ್ಶಿ ಜುಡಿತ್ ಪಿರೇರಾ, ಕೋಶಧಿಕಾರಿ ಫ್ರ್ಯಾಂಕಿ ಕಾರ್ಡೊಜಾ, ಜೊತೆ ಕೋಶಾಧಿಕಾರಿ ಸ್ಯಾಂಡ್ರಾ ಕ್ರಾಸ್ತಾ, ‘ಆಮ್ಚೊ ಸಂದೇಶ್’ ಪ್ರತಿನಿಧಿ ಸ್ಟೀವನ್ ಡಿಸೋಜಾ, ರಾಜಕೀಯ ಸಂಚಾಲಕ ರೋಯ್ಸ್ ಫೆರ್ನಾಂಡಿಸ್, ಸರ್ಕಾರಿ ಸೌಲಭ್ಯದ ಸಂಚಾಲಕಿ
ರೋಜ್ಲಿನ್ ಅಲ್ಮೇಡಾ, ಆಂತರಿಕ ಲೆಕ್ಕ ಪರಿಶೊಧಕ ಡೋರಿನ್ ಪಿಂಟೊ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲೋರೆನ್ಸ್ ಡೇಸಾ, ಆಸ್ಟಿನ್ ಕರ್ಡೊಜಾ, ಹೆಲೆನ್ ಫೆರ್ನಾಂಡಿಸ್, ಅಗ್ನೆಸ್ ಫೆರ್ನಾಂಡಿಸ್, ಮ್ಯಾಕ್ಸಿಮ್ ಡಿಸಿಲ್ವ ಆಯ್ಕೆಯಾಗಿದ್ದಾರೆ.