ವಿಧಾನ ಪರಿಷತ್ ಚುನಾವಣಾ ಮತ ಏಣಿಕೆ: ಡಾ.ಧನಂಜಯ ಸರ್ಜಿಗೆ ಭರ್ಜರಿ ಮುನ್ನಡೆ
ಮೈಸೂರು: ಕರ್ನಾಟಕ ವಿಧಾನ ಪರಿಷತ್ನ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯಗಳು ನಡೆಯುತ್ತಿದ್ದು ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಎರಡನೇ ಸುತ್ತಿನಲ್ಲಿಯೂ ಮುನ್ನಡೆ ಕಾಯ್ದಿರಿಸಿಕೊಂಡಿದ್ದಾರೆ.
ಪ್ರಥಮ ಸುತ್ತಿನ 28000 ಮತಗಳಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರು 14077, ಕಾಂಗ್ರೆಸ್ನ ಆಯನೂರು ಮಂಜುನಾಥ 5250 ಹಾಗೂ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ 5051 ಮತಗಳನ್ನು ಪಡೆದುಕೊಂಡಿದ್ದಾರೆ.
3ನೇ ಸುತ್ತು – ಒಟ್ಟು ಮತ 39000
ಡಾ.ಧನಂಜಯ ಸರ್ಜಿ – 22630
ಆಯನೂರು ಮಂಜುನಾಥ – 7952
ರಘುಪತಿ ಭಟ್- 5257