ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HSS): ಜಿಲ್ಲಾ ಸಂಚಾಲಕರಾಗಿ ಬಿಲಾಲ್ ಮಲ್ಪೆ ಆಯ್ಕೆ
ಉಡುಪಿ: ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಇದರ 2024-26 ರ ಅವಧಿಗೆ ನೂತನ ಜಿಲ್ಲಾ ಸಂಚಾಲಕರಾಗಿ ಬಿಲಾಲ್ ಮಲ್ಪೆಯವರನ್ನು ಆಯ್ಕೆ ಮಾಡಲಾಗಿದೆ.
ಎಚ್.ಆರ್.ಎಸ್’ನ ರಾಜ್ಯ ಹೊಣೆಗಾರರಾದ ಅಮೀರ್ ಕುದ್ರೋಳಿ ಅವರ ನೇತೃತ್ವದಲ್ಲಿ ಎಚ್.ಆರ್.ಎಸ್’ನ ಜಿಲ್ಲಾ ಕಚೇರಿಯಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಬಿಲಾಲ್ ಮಲ್ಪೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇನ್ನು ಮಲ್ಪೆಯ ಗ್ರೂಪ್ ಲೀಡರಾಗಿ ಝುಬೇರ್ ಮಲ್ಪೆ, ಹೂಡೆಯ ಗ್ರೂಪ್ ಲೀಡರಾಗಿ ಅಲ್ತಾಫ್ ನಕ್ವಾ, ಉಡುಪಿಯ ಗ್ರೂಪ್ ಲೀಡರಾಗಿ ಶಾರೂಕ್ ತೀರ್ಥಹಳ್ಳಿ, ಕಾಪುವಿನ ಗ್ರೂಪ್ ಲೀಡರಾಗಿ ಮುಹಮ್ಮದ್ ಅಲಿ ಕಾಪು ಅವರನ್ನು ಆಯ್ಕೆ ಮಾಡಲಾಗಿದೆ.
ಎಚ್.ಆರ್.ಎಸ್ ರಾಜ್ಯ ಮಟ್ಟದ ತುರ್ತು ಸಂದರ್ಭ ದಲ್ಲಿ ಕಾರ್ಯ ನಿರ್ವಹಿಸುವ ಸಂಘಟನೆಯಾಗಿದ್ದು ತರಬೇತುಗೊಂಡ ಸದಸ್ಯರನ್ನು ಹೊಂದಿದೆ. ಕೋವಿಡ್ ನಂತಹ ಅನಾಹುತ, ಪ್ರವಾಹ, ಬೆಂಕಿ ಅವಘಡ, ಪ್ರವಾಹ ನಿರಾಶ್ರಿತರಿಗೆ ಸಹಾಯ, ಅವಘಡಗಳ ಸಂದರ್ಭದಲ್ಲಿ ನಿರ್ವಹಣಾ ತರಬೇತಿ ಕಾರ್ಯಾಗಾರ ಸೇರಿದಂತೆ ಹಲವು ಕಾರ್ಯಚಟುವಟಿಕೆಗಳನ್ನು ನಡೆಸುವ ಸಂಸ್ಥೆಯಾಗಿದೆ. ಕಳೆದ ಕೋವಿಡ್ ದುರಂತ ಮತ್ತು ನೆರೆಯ ಸಂದರ್ಭದಲ್ಲಿ ಎಚ್.ಆರ್.ಎಸ್ ನ ನೂರಾರು ಕಾರ್ಯಕರ್ತರು ಉಡುಪಿ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.