ಶ್ರೀರಾಮ ಮಂದಿರ ಲೋಕಾರ್ಪಣೆ- ಪುಣ್ಯ ಕೋಟಿ ಗೋಸೇವಾ ಬಳಗದಿಂದ ಗೋಪೂಜೆ
ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ, ಹಾಗೂ ಪ್ರಭು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ಐತಿಹಾಸಿಕ ದಿನದ ಅವಿಸ್ಮರಣೀಯ ದಿನವನ್ನು, ನಿನ್ನೆ ದೇಶದಾದ್ಯಂತ ಜನರು ಅತ್ಯಂತ ಶೃದ್ಧಾಭಕ್ತಿಯಿಂದ, ಸಂಭ್ರಮದಿಂದ ಆಚರಿಸಿದ್ದು, ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗದ ಸದಸ್ಯರು, ಶ್ರೀ ರಾಮದೇವರ ಪ್ರಾಣ ಪ್ರತಿಷ್ಠಾಪನೆಯ ಶುಭದಿನದಂದು ಗೋಧೂಳಿ ಸಮಯದಲ್ಲಿ, ತಮ್ಮ 84 ನೇ ತಿಂಗಳ ಗೋಪೂಜೆಯನ್ನು ಅಲೆವೂರು ಕೆಳಮನೆ ಗಿರಿಜಾ ಶೆಟ್ಟಿ ಇವರ ಮನೆಯಲ್ಲಿ ಆಚರಿಸಿದರು.
ಪುಣ್ಯಕೋಟಿ ಗೋಸೇವಾ ಬಳಗದ ಪ್ರಮುಖರಾದ ಜ್ಯೋತಿ ಸತೀಶ್ ದೇವಾಡಿಗ, ತಾರಾ ಯು.ಆಚಾರ್ಯ, ಸರೋಜಾ ಯಶವಂತ್, ಅನುರಾಧಾ ಉದಯ್, ಸರೋಜಾ ಶೆಣೈ, ರೇವತಿ ರಮಾನಂದ್ ಶೆಟ್ಟಿ, ಶಾಂತಾ ಕೊಳಂಬೆ, ಅನಿತಾ ನಾಯ್ಕ್, ವಿನುತಾ ಶೇರಿಗಾರ್ ಹಾಗೂ ಗಿರಿಜಾ ಶೆಟ್ಟಿ ಮತ್ತು ಮನೆಯವರು ಉಪಸ್ಥಿತರಿದ್ದರು.