ಉಡುಪಿ: ಶ್ರೀರಾಮ ಪ್ರಾಣ ಪ್ರತಿಷ್ಠೆ- ಉಚಿತ ಆಟೋ ಸೇವೆ
ಉಡುಪಿ: ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯ ಆಟೋ ಚಾಲಕ ಮಾಲಕರ ಸಂಭ್ರಮಾಚರಣೆ ಭಾಗವಾಗಿ ಇಂದು ಉಚಿತ ಆಟೋ ಸೇವೆ ನೀಡಿದೆ.
ಕೋರ್ಟ್ ಹಿಂಭಾಗದ ಆಟೋ ಚಾಲಕ ಮಾಲಕರ ಸಂಘದಿಂದ ಇಂದು ಸಂಜೆ ಆರು ಗಂಟೆ ತನಕ ಪ್ರಯಾಣಿಕರಿಗೆ ಫ್ರೀ ಸರ್ವಿಸ್ ಕೈಗೊಂಡಿದ್ದಾರೆ.ಇನ್ನು ಸ್ವಯಂಪ್ರೇರಿತರಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಜನರು ಈ ಉಚಿತ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಆಟೋ ಚಾಲಕ ಮಾಲಕರು ತಿಳಿಸಿದ್ದಾರೆ.