ಬಡಗಬೆಟ್ಟು ಕ್ರೆ.ಕೋ.ಆ. ಸೊಸೈಟಿ: ಕಾರ್ಕಳದಲ್ಲಿ 11ನೇ ಶಾಖೆ ಜ.26 ರಂದು ಉದ್ಘಾಟನೆ
ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗೆ ಸರಿಸಮಾನವಾಗಿ ಗ್ರಾಹಕರಿಗೆ ಸೇವೆ ನೀಡುವ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ಸಂಪೂರ್ಣ ಹವಾನಿಯಂತ್ರಿತ ನೂತನ ಶಾಖೆ ಜ.26 ರಂದು ಕಾರ್ಕಳದ ಅನಂತಶಯನ ರಸ್ತೆ ವಿಕಾಸ ಟವರ್ನಲ್ಲಿ ಉದ್ಘಾಟನೆಗೊಳ್ಳಲಿದೆ.
ನೂತನ ಶಾಖೆಯನ್ನು ಜ.26 ರಂದು ಸಂಜೆ 4 ಗಂಟೆಗೆ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಜೈನ ಮಠ ಮೂಡುಬಿದ್ರೆ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಆಶಿರ್ವಾಚನ ನೀಡಲಿದ್ದಾರೆ. ಸಭಾಧ್ಯಕ್ಷರಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್, ಗೌರವ ಉಪಸ್ಥಿತಿ ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ ವಹಿಸಲಿದ್ದಾರೆ.
ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಜಿಲ್ಲಾಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಕಳ ವೆಂಕಟರಮಣ ದೇವಸ್ಥಾನ ಆಡಳಿತ ಮೊಕೇಸರ ಕೆ.ಜಯರಾಮ್ ಪ್ರಭು, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ, ಪುರಸಭಾ ಸದಸ್ಯ ಶುಭದ ರಾವ್, ಸಹಕಾರ ಸಂಘಗಳಉಪನಿಬಂಧಕರು ರಮೇಶ್ ಹೆಚ್.ಎನ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕುಂದಾಪುರ ಉಪವಿಭಾಗದ ಅರುಣ್ ಕುಮಾರ್ ಎಸ್. ವಿ ಭಾಗವಹಿಸಲಿದ್ದಾರೆಂದು ಸೊಸೈಟಿಯ ಅಧ್ಯಕ್ಷರಾದ ಸಂಜೀವ ಕಾಂಚನ್ ಹಾಗೂ ಪ್ರಧಾನ ವ್ಯವಸ್ಥಾಪಕರು ರಾಜೇಶ್ ವಿ. ಶೇರಿಗಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.