ಉಡುಪಿ: ಬೊಲೆರೋ ವಾಹನ ಢಿಕ್ಕಿ- ಸ್ಕೂಟರ್ ಸವಾರ ಮೃತ್ಯು
ಉಡುಪಿ: ಬೊಲೆರೋ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರೊಬ್ಬರು ಮೃತಪಟ್ಟ ಘಟನೆ ಅಂಬಲಪಾಡಿ ಗ್ರಾಮದ ನಿಸರ್ಗ ಫ್ರೆಶ್ ಆಯಿಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜ.20 ರಂದು ರಾತ್ರಿ ನಡೆದಿದೆ.
ಮೃತರನ್ನು ಸವಾರ ಕೊಳಲಗಿರಿಯ ರಾಕೇಶ್(27) ಎಂದು ಗುರುತಿಸಲಾಗಿದೆ. ಇವರು ಸ್ಕೂಟರ್ನಲ್ಲಿ ಕೆಲಸದ ನಿಮಿತ್ತ ಕಟಪಾಡಿಗೆ ಹೋಗಿ ವಾಪಾಸು ಉಡುಪಿ ಕಡೆ ಬರುತ್ತಿದ್ದಾಗ ಬೊಲೆರೋ ಪಿಕಪ್ ವಾಹನ ಎದುರಿನಲ್ಲಿದ್ದ ದ್ವಿಚಕ್ರ ವಾಹನ ವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅತೀವೇಗದಿಂದ ಬಂದು ರಾಕೇಶ ಅವರ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆಯಿ ತ್ತೆನ್ನಲಾಗಿದೆ. ಇದರ ಪರಿಣಾಮ ರಾಕೇಶ್ ಸ್ಕೂಟರ್ ನಿಂದ ಹಾರಿದ್ದು, ಅವರ ತಲೆ ಬೊಲೆರೋ ವಾಹನದ ಮುಂಭಾಗದ ಗಾಜಿಗೆ ತಾಗಿ ರಸ್ತೆಗೆ ಬಿದ್ದರೆನ್ನಲಾಗಿದೆ.
ಬಳಿಕ ರಾಕೇಶ್ ಮೇಲೆಯೇ ಬೊಲೆರೋ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದು, ಇದರಿಂದ ಗಂಭೀರವಾಗಿ ಗಾಯ ಗೊಂಡ ರಾಕೇಶ್, ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.