ಡಾ.ಶಿವರಾಮ್ ಶೆಟ್ಟಿ, ಡಾ.ಹರೀಶ್ಚಂದ್ರ, ಶೇಖ್ ವಹಿದ್‌ರಿಗೆ ಪುತ್ತಿಗೆ ಮಠದಿಂದ ಅಭಿನಂದನೆ
ಉಡುಪಿ: ಪುತ್ತಿಗೆ ಪರ್ಯಾಯದ ಮೂರನೇ ದಿನದ ಕಾರ್ಯಕ್ರಮ ಶನಿವಾರ ರಾಜಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಹಿಂದೆ ಸರಕಾರ ಅಷ್ಠ ಮಠಗಳನ್ನು ಸರರ್ಕಾರೀಕರಣಗೊಳಿಸುವ ಪ್ರಸ್ತಾವ ಹೊಂದಿತ್ತು. ಆಗ ಈ ಪ್ರಸ್ತಾಪದ ವಿರುದ್ಧ ಧ್ವನಿ ಎತ್ತುವಂತೆ ಅಂದಿನ ವಿರೋಧ ಪಕ್ಷದ ನಾಯಕ ಸದಾನಂದ ಗೌಡ ಸೂಚಿಸಿದ್ದರು. ಅಂದು ಸರಕಾರಕ್ಕೆ ಸಮರ್ಥವಾಗಿ ಶ್ರೀಕೃಷ್ಣ ಮಠದ ಇತಿಹಾಸದ ಬಗ್ಗೆ ಮಾಹಿತಿಗಳನ್ನು ಮಂಡಿಸಿದ್ದೆ ಎಂದರು.
ಹಿಂದೂ ಧರ್ಮದ ಹೃದಯದ ಭಾಗವಾಗಿರುವ ಕೃಷ್ಣ ಮಠ ಹಾಗೂ ಅಷ್ಠ ಮಠಗಳನ್ನು ವಶಕ್ಕೆ ಪಡೆದರೆ ಬಹುದೊಡ್ಡ ವಿವಾದಕ್ಕೆ ಕಾರಣವಾಗಬಹುದೆಂದು ಸರಕಾರದ ಗಮನ ಸೆಳೆದಿದ್ದೆ ಎಂದು ಸಭೆಯಲ್ಲಿ ತಿಳಿಸಿದರು.
ಪರ್ಯಾಯ ಮಠಾಧೀಶರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪರ್ಯಾಯಕ್ಕೆ ದುಂದುವೆಚ್ಚ ಅಗತ್ಯವೇ, ಹಣವನ್ನು ಬಡವರಿಗೆ ಹಂಚ ಬಹುದಿತ್ತಲ್ಲವೇ ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ, ಅದ್ದೂರಿಯಾಗಿ ವಿವಾಹ ಮಾಡುವಾಗ, ವೈಭವಯುತವಾಗಿ ವೈಯಕ್ತಿಕ ಕಾರ್ಯಕ್ರಮ ಮಾಡುವಾಗ ಜಾಣಮೌನ ಪ್ರದರ್ಶಿಸುತ್ತಾರೆ. ಆದರೆ, ದೇವರ ಪೂಜೆ, ಉತ್ಸವದ ವಿಚಾರದಲ್ಲಿ ಮಾತ್ರ ಪ್ರಶ್ನೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವರು ಸರ್ವಶಕ್ತನಾಗಿರುವಾಗ ಉತ್ಸವ, ದುಂದುವೆಚ್ಚ ಅಗತ್ಯವಿಲ್ಲ ಎಂಬ ಭಾವನೆ ಕೆಲವರಲ್ಲಿ ಇದೆ. ಆದರೆ, ಶಾಸ್ತ್ರಗಳ ಪ್ರಕಾರ ದೇವರ ಪೂಜೆ, ಉತ್ಸವಾದಿಗಳ ಹೊರತಾಗಿ ಅನ್ಯಕಾರ್ಯಗಳಿಗೆ ವೆಚ್ಚಕ್ಕೆ ಅರ್ಥವಿಲ್ಲ. ಮಾಡುವ ತಿನ್ನುವುದು, ಮಲಗುವುದಷ್ಟೆ ಜೀವನದ ಸಾರ್ಥಕ್ಯ ಎಂದು ಭಾವಿಸಲಾಗಿದೆ. ಭಗವಂತನ ಪ್ರಜ್ಞೆ ಬೆಳೆಸಿಕೊಳ್ಳುವುದು, ಆರಾಧನೆ ಮಾಡುವುದು ಹಾಗೂ ಕೃತಜ್ಞತೆ ಸಲ್ಲಿಸುವುದು ಬಹಳ ಮುಖ್ಯ ಎಂದರು.
ದೇವರ ಪೂಜೆ, ಆರಾಧನೆಗೆ ಎಷ್ಟು ಸಮಯ ಮೀಸಲಿಟ್ಟರೂ, ಹಣ ವ್ಯಯಿಸಿದರೂ ಕಡಿಮೆಯೇ. ದೇವರ ಸೇವೆಗೆ ಪ್ರತಿಯಾಗಿ ಪ್ರತಿಫಲ ಹಾಗೂ ಪುಣ್ಯ ಪ್ರಾಪ್ತಿಯಾಗಲಿದೆ ಸ್ವಾಮೀಜಿ ಹೇಳಿದರು. ಎಂದು ಅಂಗವಾಗಿ
ಪರ್ಯಾಯದ ರಾಧೆ ಜಗ್ಗಿ ಅವರ ‘ನಾಥ ಹರೇ’ ಭರತನಾಟ್ಯ ಕಣ್ಮನ ಸೆಳೆಯಿತು. ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ತಲ್ಲೂರು ಶಿವರಾಮ ಶೆಟ್ಟಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಸಮಾಜ ಸೇವಕ ಶೇಖ್ ವಹೀದ್ ಅವರನ್ನು ಪ್ರಶಸ್ತಿ ಸಹಿತ ಗೌರವಿಸಲಾಯಿತು.