ಉಡುಪಿ: “ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆ- 2024”
ಉಡುಪಿ: ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ನೇತೃತ್ವದಲ್ಲಿ ಪುತ್ತಿಗೆ ಮಠದ ಪರ್ಯಾಯೋತ್ಸವದ ಅಂಗವಾಗಿ “ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆ-2024″ ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ. 3,000 ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ರೂ.2,000 ಪ್ರಶಸ್ತಿ ಪತ್ರ ಮತ್ತು ತೃತೀಯ ಬಹುಮಾನ ರೂ. 1,000 ಪ್ರಶಸ್ತಿ ಪತ್ರ, ಹಾಗೂ 3 ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಸ್ಪರ್ಧೆಯ ನಿಯಮಗಳು
1. ಕಳುಹಿಸಲು ಛಾಯಾಚಿತ್ರದ ಗಾತ್ರ 12×18 ಅಳತೆಯಲ್ಲಿರಬೇಕು. ಮೊಬೈಲ್ನಲ್ಲಿ ತೆಗೆದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
2. ಪ್ರತಿ ಸ್ಪರ್ಧಿಗೆ ಎರಡು ಛಾಯಾಚಿತ್ರ ಕಳುಹಿಸುವ ಅವಕಾಶವಿದೆ.
3. ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ.
4. ಛಾಯಾಚಿತ್ರ ಕಳುಹಿಸಲು ಕೊನೆಯ ದಿನಾಂಕ 31-01-2024
5. ದಿನಾಂಕ 2024 ಜನವರಿ 17 ಮತ್ತು 18ರಂದು ನಡೆಯುವ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.
6. ತೀರ್ಪುಗಾರರ ತೀರ್ಮಾನವೇ ಅಂತಿಮ
7. ಛಾಯಾ ಚಿತ್ರಗಳನ್ನು ಸಾಧಾರಣ ಅಂಚೆ ಅಥವಾ ತ್ವರಿತ ಅಂಚೆ ಇಲ್ಲವೇ ನೊಂದಾಯಿತ ಅಂಚೆ ಮೂಲಕವೇ ಕಳುಹಿಸಬೇಕು.