ಮಂಗಳೂರು ಹಾಲಿನ ವಾಹನದಲ್ಲೂ ಗೋ ಮಾಂಸ ಸಾಗಾಟ! – ಪತ್ತೆ ಹಚ್ಚಿದ ಭಜರಂಗದಳ
ಮಂಗಳೂರು: (ಉಡುಪಿ ಟೈಮ್ಸ್ ವರದಿ) ಆರೋಗ್ಯ ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದವರ ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ನೀಡಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ವಾಹನವನ್ನು ಪಂಪವೆಲ್ ನಿಂದ ಬೆನ್ನಟ್ಟಿದ ಬಜರಂಗದಳದ ಕಾರ್ಯಕರ್ತರು ವೆನ್ಲಾಕ್ ಆಸ್ಪತ್ರೆ ಬಳಿ ಹಿಡಿದು ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳು ಹಾಸನದಿಂದ ಕುದ್ರೋಳಿಗೆ ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.