ಉಚಿತ ಗ್ಯಾರಂಟಿ ನೀಡಿದರೆ ತಲೆ ಬೋಳಿಸುವುದಾಗಿ ಹೇಳಿದ ಜಿಲ್ಲಾ ಅಧ್ಯಕ್ಷರ ತಲೆದಂಡ- ಸುರೇಶ್ ಶೆಟ್ಟಿ
ಉಡುಪಿ: ವಿಧಾನಸಭಾಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ನೀಡಿದರೆ ರಾಜ್ಯದ ಜನರಿಗೆ ಉಚಿತ ವಿದ್ಯುತ್ 200 ಯೂನಿಟ್, ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಹಣ, ರಾಜ್ಯದಾದ್ಯಂತ ತಿರುಗಾಡಲು ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸರಕಾರಿ ಬಸ್ ನಲ್ಲಿ ಪ್ರಯಾಣ, ಬಿಪಿಎಲ್ ಕಾರ್ಡ್ ನವರಿಗೆ ಪ್ರತಿ ತಿಂಗಳು ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ. ಆದರೆ ಮೋದಿ ಸರ್ಕಾರ ಹಾಗೂ ಈ ಬಿಜೆಪಿ ನಾಯಕರು ರಾಜ್ಯದ ಜನರಿಗೆ ಅಕ್ಕಿನೀಡಲು ನಿರಾಕರಿಸಿದ್ದು ಅದಕ್ಕಾಗಿ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಇದ್ದವರ ಖಾತೆಗೆ ಐದು ಕೆಜಿ ಅಕ್ಕಿ ಹಣವನ್ನು ನಮ್ಮ ಕಾಂಗ್ರೆಸ್ ಪಕ್ಷದ ಸರಕಾರ
ನಿರಂತರವಾಗಿ ಪ್ರತಿ ತಿಂಗಳು ನೀಡುತ್ತಿದ್ದೆ. ಇದನ್ನು ರಾಜ್ಯದ ಜನರು ಸಂತೋಷದಿಂದ ಪಡೆದುಕೊಂಡು ಹರ್ಷಿತರಾಗಿದ್ದಾರೆ. ಇದನ್ನು ಕಂಡ ಬಿಜೆಪಿ ನಾಯಕರಿಗೆ ಮೈ ತುಂಬಾ ಉರಿ ಶುರುವಾಗಿದೆ. ಈ ಹಿಂದೆ ಈ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಲ್ಲಿ ತನ್ನ ತಲೆಯನ್ನು ಬೋಳಿಸಿಕೊಂಡು ಕೆಪಿಸಿಸಿ ಕಚೇರಿ ಎದುರು ಕುಳಿತುಕೊಳ್ಳುತ್ತೇನೆ ಎಂದು ಹೇಳಿದ ಉಡುಪಿಯ ಆಗಿನ ಬಿಜೆಪಿ ಅಧ್ಯಕ್ಷರು ತಾವು ಹೇಳಿದ ಮಾತಿನಂತೆ ನಡೆಯದೆ, ಇಲ್ಲ ಸಲ್ಲದ ಸಬೂಬ್ ಗಳನ್ನು ಹೇಳುತ್ತಾ ರಾಜ್ಯದ ಜನರನ್ನು ಮೋಸಗೊಳಿಸುತ್ತಲೇ ಇದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ನೀಡುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶದ ಜನರೇ ಪ್ರಶಂಸುತ್ತಿದ್ದಾರೆಂದು ಸುರೇಶ್ ಶೆಟ್ಟಿ ಬನ್ನಂಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನು ಕಂಡ ಬಿಜೆಪಿಯ ರಾಷ್ಟ್ರೀಯ ನಾಯಕರುಗಳು ಕಂಗಾಲಾಗಿ ಜಿಲ್ಲಾ ಬಿಜೆಪಿ ನಾಯಕರನ್ನು ಬದಲಾಯಿಸಿರುತ್ತಾರೆ. ತಲೆ ಬೋಳಿಸುತ್ತೇನೆ ಎಂದು ಹೇಳಿದ ಈ ಬಿಜೆಪಿ ನಾಯಕರ ತಲೆದಂಡವಾಗಿದೆ ಎಂದು ಉಡುಪಿ ಬ್ಲಾಕ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಮ್ಮ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.