ಅಕ್ರಮ ಮರಳುಗಾರಿಕೆಗೆ ದಾಳಿ: ಇಬ್ಬರ ಬಂಧನ- 15ಲಕ್ಷ ಮೌಲ್ಯದ ಸೊತ್ತು ವಶ
ಮಣಿಪಾಲ: ಹೀರೆಬೆಟ್ಟು ಗ್ರಾಮದ ಕಂಬಳಕಟ್ಟ ಎಂಬಲ್ಲಿ ಜ.13 ರಂದು ಅಕ್ರಮವಾಗಿ ನಡೆಸುತ್ತಿದ್ದ ಮರಳುಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕವನ್ (37), ಅಪ್ಪಯ್ಯ ಎಲ್ಲಪ್ಪವಾಳದ್ (30) ಎಂದು ಗುರುತಿಸಲಾಗಿದೆ. ಇವರಿಂದ ಡ್ರೆಜ್ಜಿಂಗ್ ಮೆಶಿನ್, ಬೋಟ್, ಹಾರೆಗಳು, ಬುಟ್ಟಿ ಹಾಗೂ ಒಂದು ಯುನಿಟ್ ಮರಳು, 407 ಟಿಪ್ಪರ್, ಹಾಗೂ ಲಾರಿಯಲ್ಲಿದ್ದ 1.5ಯುನಿಟ್ ಮರಳು ಮತ್ತು ಹಿಟಾಚಿ ಮೆಷಿನ್ನನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 15,21,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.