ಬ್ರಹ್ಮಾವರ: ನಿವೃತ್ತ ಬ್ಯಾಂಕ್ ಉದ್ಯೋಗಿ, ಯಕ್ಷಗಾನ ಕಲಾವಿದ ಬಿ. ನಾರಾಯಣ ಕುಂದರ್ ನಿಧನ
ಬ್ರಹ್ಮಾವರ: ಬೈಕಾಡಿಯ ನಿವಾಸಿ ಬಿ.ನಾರಾಯಣ ಕುಂದರ್ (68) ಅಲ್ಪಕಾಲದ ಅಸೌಖ್ಯದಿಂದ ಜನವರಿ 13ರ ಸಂಜೆ ಸ್ವಗ್ರಹದಲ್ಲಿ ನಿಧನರಾದರು.
ಮೃತರು ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಉದ್ಯೋಗಿಯಾಗಿದ್ದರು. ಮಾತ್ರವಲ್ಲದೆ ಬಾರ್ಕೂರು ಮತ್ತು ಬ್ರಹ್ಮಾವರ ಶಾಖೆಗಳಲ್ಲಿ ಕಾರ್ಯನಿಹಿಸಿದ್ದರು. ಸ್ಥಳೀಯವಾಗಿ ಹವ್ಯಾಸಿ ಯಕ್ಷಗಾನ ತಂಡ ಕಟ್ಟಿಕೊಂಡು ಯಕ್ಷಗಾನದ ಪೋಷಕರಾಗಿಯೂ ಮತ್ತು ಯಕ್ಷಗಾನ ಕಲಾವಿದರಾಗಿ ಮಹಿಷಾಸುರನ ಪಾತ್ರದಲ್ಲಿ ಮಿಂಚಿದ್ದರು.
ಬೈಕಾಡಿಯ ಮೊಗವೀರ ಗ್ರಾಮ ಸಭೆಯ ಮಾಜಿ ಅಧ್ಯಕ್ಷರಾಗಿದ್ದು. ಬೈಕಾಡಿ ಯುವಕಮಂಡಲ ಮಾಜಿ ಸದಸ್ಯರಾಗಿದ್ದು, ಸ್ಥಳೀಯ ಬೈಕಾಡ್ತಿ ದೈವ ಸ್ಥಾನದಲ್ಲಿ ತಮ್ಮನ್ನು ದೇವತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಮೃತರಿಗೆ ಪತ್ನಿ, ಮೂರು ಹೆಣ್ಣು, ಎರಡು ಗಂಡುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.