ಉಡುಪಿ ಪರ್ಯಾಯೋತ್ಸವ: ಜ. 17 ಮತ್ತು18 – ಗಣ್ಯರ ವಾಹನ ನಿಲುಗಡೆಗೆ ಸ್ಥಳ ನಿಯೋಜನೆ
ಉಡುಪಿ: ಜನವರಿ 17 ಮತ್ತು 18 ರಂದು ಶ್ರೀ ಕೃಷ್ಣ ಮಠದ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ಅತೀ ಗಣ್ಯರ ವಾಹನ ನಿಲುಗಡೆಗೆ ಸ್ಥಳ ನಿಯೋಜಿಸಲು ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಲಿದ್ದು ಪರ್ಯಾಯ ದರ್ಬಾರ್ ಮತ್ತು ಗಣ್ಯರ ವಾಹನ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಶ್ರೀಕೃಷ್ಣ ಮಠದ ರಾಜಾಂಗಣ ಬಳಿಯ ಪೇ ಪಾರ್ಕಿಂಗ್ ಹಾಗೂ ಹೊರಗಡೆಯಿಂದ ಬರುವ ಎಲ್ಲಾ ವಾಹನಗಳಿಗೆ ಪಾರ್ಕಿಂಗ್ ಗೆ ಸ್ಥಳ ಕಾಯ್ದಿರಸಲಾಗಿದೆ.
ಪರ್ಯಾಯೋತ್ಸವ ದರ್ಬಾರ್ ಕಾರ್ಯಕ್ರಮ ಮತ್ತು ವಿವಿಐಪಿ ವಾಹನ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಶ್ರೀ ಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಮತ್ತು ಡಿ ಮಾರ್ಟ್ ಪಾರ್ಕಿಂಗ್ ಸ್ಥಳವನ್ನು ವಿಐಪಿ ವಾಹನ ಪಾರ್ಕಿಂಗ್‌ಗೆ ಹಾಗೂ ಹೊರಗಡೆಯಿಂದ ಬರುವ ಎಲ್ಲಾ ವಾಹನಗಳಿಗೆ ಈ ಕೆಳಕಂಡಂತೆ ಸ್ಥಳವನ್ನು ಕಾಯ್ದಿರಿಸಲು ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಆದೇಶ ನೀಡಬೇಕಾಗಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಇವರು ಕೋರಿರುತ್ತಾರೆ.