ಉಡುಪಿ ಟೈಮ್ಸ್, ಕೆಮ್ಮಲೆ ಮುದ್ದುಕೃಷ್ಣ ಹಾಗು ಕೃಷ್ಣ ಬಲ ಚೈತನ್ಯ ಸ್ಪರ್ಧೆಯ ಫಲಿತಾಂಶ

ಉಡುಪಿ- ‘ಉಡುಪಿ ಟೈಮ್ಸ್’ ಅರ್ಪಿಸುವ ‘ಕೆಮ್ಮಲೆ ಮುದ್ದು ಕೃಷ್ಣ’ ಹಾಗೂ ‘ಕೃಷ್ಣ ಬಲ ಚೈತನ್ಯ’ ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹಿರಣ್ಮಯಿ ಭಟ್, ಕುಂಜಿಬೆಟ್ಟು , ಉಡುಪಿ (ತಂದೆ- ಸುಧೀರ್ ಭಟ್, ತಾಯಿ -ಪ್ರಜ್ವಲಿ.ಎಸ್. ಭಟ್) ಗಳಿಸಿದ್ದು,

ದ್ವಿತೀಯ ಬಹುಮಾನವನ್ನು ಸಮನ್ವಿ, ಬ್ರಹ್ಮಾವರ (ತಂದೆ ಸುಭಾಶ್ಚಂದ್ರ ,ತಾಯಿ ಪಲ್ಲವಿ) ಗಳಿಸಿದ್ದಾರೆ.

ತೃತೀಯ ಬಹುಮಾನವನ್ನು ಅಥರ್ವ್ ಅಡಿಗ, ಕುಂಜಿಬೆಟ್ಟು ಉಡುಪಿ (ತಂದೆ- ಪ್ರಸಾದ್ ಅಡಿಗ ,ತಾಯಿ -ಮಾಲತಿ ಅಡಿಗ)

5 ಸಮಾಧಾನಕರ ಬಹುಮಾನ

ಆಶ್ವಿ ಮಟ್ಪಾಡಿ (ತಂದೆ – ಸಂದೀಪ್ ಕೆ ಆರ್, ತಾಯಿ ಸಹನಾ ನಾಯಕ್)

ಅನೈರ ಕೋಟ್ಯಾನ್ ಅಂಬಲಪಾಡಿ, ಉಡುಪಿ (ತಂದೆ- ಗುರುದತ್ತ ಕೋಟ್ಯಾನ್, ತಾಯಿ ವನಿತಾ ಕೋಟ್ಯಾನ್),

ಪ್ರಿಯಾಂಶ ಎಸ್ ಕೋಟ್ಯಾನ್ ಮಾರ್ಪಾಡಿ ,ಮೂಡಬಿದ್ರೆ (ತಂದೆ – ಸುನಿಲ್ ಕುಮಾರ್ ,ತಾಯಿ ಪೂರ್ಣಿಮಾ ),

ದಶ್ವಿ ಮೂಡುಅಲೆವೂರು (ತಂದೆ- ವಿಜಯ್ ದೇವಾಡಿಗ, ತಾಯಿ -ಪವಿತ್ರ )

ಸ್ಮಯ.ಎಂ ಬ್ರಹ್ಮಾವರ (ತಂದೆ- ಮಿಥುನ್, ತಾಯಿ -ಶಶಿಕಲಾ) ಆಯ್ಕೆಯಾಗಿದ್ದಾರೆ.

ಕೃಷ್ಣ ಬಲ ಚೈತನ್ಯ’ – “ಉಡುಪಿ ಟೈಮ್ಸ್” ವೆಬ್ಸೈಟ್ ನ ಹೊಸ ಪ್ರಯೋಗ ಪೃಕ್ರತಿ ನಡುವೆ ಕೃಷ್ಣ ಬಲರಾಮರ ಫೋಟೋ ಸ್ಪರ್ಧೆಯ ಫಲಿತಾಂಶ.

ಪ್ರಥಮ ಬಹುಮಾನ
ತನ್ವಿ ಬ್ರಹ್ಮಾವರ (ತಂದೆ -ಕೃಷ್ಣ ಪ್ರಸಾದ್, ತಾಯಿ -ದಿವ್ಯಶ್ರೀ) ಲಿಖಿತ್ ಸಿ. ಗೌಡ, ಕುಂದಾಪುರ(ತಂದೆ- ಚಂದನ್ ಗೌಡ, ತಾಯಿ ರೇಖಾ ಗೌಡ) ಜೋಡಿ ಗೆದ್ದಿದೆ.

ದ್ವಿತೀಯ ಬಹುಮಾನವನ್ನು ಅದ್ವಿತಿ ಎಸ್ ಪಾಂಡೇಶ್ವರ ಸಾಸ್ತಾನ (ತಂದೆ ಸಂತೋಷ್ ಕಾಂಚನ್, ತಾಯಿ – ಅನುಷಾ ಕೆ ಎಸ್) ,ಶ್ರೀಯಾ ಎಸ್ ಕಾಂಚನ್ ಐರೋಡಿ, ಸಾಸ್ತಾನ  (ತಂದೆ -ಸಂತೋಷ್, ತಾಯಿ- ಲತಾ) ಪಡೆದುಕೊಂಡರೆ,

ತೃತೀಯ ಬಹುಮಾನವನ್ನು ಪ್ರೇಕ್ಷಿತ ಪಿ ರಾವ್ ಕಲ್ಯಾಣಪುರ, ಉಡುಪಿ (ತಂದೆ – ಪ್ರಶಾಂತ್ ಕೆ , ತಾಯಿ ಶ್ವೇತಾ ) ಹಾಗೂ ಜೀವಿಕ ರಾಜೇಶ್ ರಾವ್ ಪುತ್ತೂರು ,ಉಡುಪಿ (ತಂದೆ – ರಾಜೇಶ್ ರಾವ್ ,ತಾಯಿ – ಅನಸೂಯ ) ಗೆದ್ದಿದ್ದಾರೆ.

ಈ ಸ್ಪರ್ಧೆಯಲ್ಲಿ 3 ಸಮಾಧಾನಕರ ಬಹುಮಾನಗಳು ಇದ್ದು ಅದರಲ್ಲಿ ಸಮನ್ಯು ನಾಯಕ್ ನಿಟ್ಟೆ, ಕಾರ್ಕಳ , (ತಂದೆ – ವಿವೇಕಾನಂದ ನಾಯಕ್, ತಾಯಿ – ಭವಾನಿ ನಾಯಕ್ ) ಹಾಗೂ ಆಯುಷ್ ಪಿ. ನಾಯಕ್, ಮಂಚಕಲ್ (ತಂದೆ -ಪ್ರಶಾಂತ್ ನಾಯಕ್ ತಾಯಿ -ಶಾಶ್ವತ ಪಿ. ಬಿ ನಾಯಕ್).

ತನಿಷ್ಕ್ ಶೆಟ್ಟಿ ,ಸಾಂತೂರು ಪಿಲಾರ್ (ತಂದೆ – ನಿತಿನ್ ಕುಮಾರ್ ಬಿ, ತಾಯಿ – ಸಪ್ನಾ ಶೆಟ್ಟಿ) , ಸುಪೇಕ್ಷ ಯು ಶೆಟ್ಟಿ ,ನಂದಿಕೂರು (ತಂದೆ -ಉಮೇಶ್ ಶೆಟ್ಟಿ , ತಾಯಿ – ಸುಪ್ರಿಯ ಯು ಶೆಟ್ಟಿ) ಜೋಡಿ

ತಸ್ಮಯಿ .ಜಿ. ಪೂಜಾರಿ ಪಡುತೋನ್ಸೆ ಹೂಡೆ (ತಂದೆ -ಗಣೇಶ್ ಬಿ ಪೂಜಾರಿ ,ತಾಯಿ -ಸುಶ್ಮಿತಾ ಬಿ ಪೂಜಾರಿ) ಕೃತಿಷ .ವಿ. ಪೂಜಾರಿ ಮಟಪಾಡಿ ಬ್ರಹ್ಮಾವರ (ತಂದೆ – ವಿಶ್ವನಾಥ್ ,ತಾಯಿ -ರೀತಾ) ಜೋಡಿ ಗೆದ್ದಿದೆ.

ಮುದ್ದು ಕೃಷ್ಣ ಹಾಗೂ ಕೃಷ್ಣ ಬಲ ಚೈತನ್ಯ ಸ್ಪರ್ಧೆಗೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದ್ದು, ಮುದ್ದು ಕಂದಮ್ಮಗಳ ಫೋಟೋಗಳು ಒಂದಕ್ಕಿಂತ ಒಂದು ಅದ್ಭುತವಾಗಿತ್ತು. ಈ ಸ್ಪರ್ಧೆಗೆ ಉಡುಪಿಯ ಪ್ರಸಿದ್ಧ ಛಾಯಾಗ್ರಾಹಕ ಪ್ರಸನ್ನ ಪೆರ್ಡೂರ್ ಮತ್ತು ರಂಗಭೂಮಿ ಕಲಾವಿದ ಹಾಗೂ ಪರಿಸರ ಪ್ರೇಮಿ ರವಿರಾಜ್ ಎಚ್. ಪಿ. ತೀರ್ಮಾನಕಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು.

“ಫೋಟೋಗಳು ತುಂಬಾ ಅದ್ಭುತವಾಗಿದ್ದು ಈ ಸ್ಪರ್ಧೆಗೆ ತೀರ್ಮಾನ ಮಾಡಲು ಫೋಟೋಗಳನ್ನು ಅತೀ ಸೂಕ್ಷ್ಮವಾಗಿ ಗಮನಿಸಬೇಕಾದ ಅವಶ್ಯಕತೆಯಿದ್ದು, ಅಂತಹ ಅಂಶಗಳನ್ನು ಗಮನದಲ್ಲಿರಿಸಿ ತೀರ್ಮಾನ ನೀಡಲಾಗಿದೆ” ಪ್ರಸನ್ನ ಪೆರ್ಡೂರ್ ಅನಿಸಿಕೆಯನ್ನು ತಿಳಿಸಿದ್ದಾರೆ.

“ಪೃಕೃತಿ ನಡುವೆ ಕೃಷ್ಣ ಬಲರಾಮ ಸ್ಪರ್ಧೆ ಹೊಸ ಪ್ರಯೋಗ, ‘ಉಡುಪಿ ಟೈಮ್ಸ್‘ ನ ಈ ಪ್ರಯತ್ನಕ್ಕೆ ಪೋಷಕರು ಸಾಥ್ ನೀಡಿದ್ದಾರೆ. ಈ ಸ್ಪರ್ಧೆಯು ವಿಶೇಷವಾಗಿದ್ದು. ಇನ್ನಷ್ಟು ಇಂಥ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಬರಲಿ” ರವಿರಾಜ್ ಎಚ್ ಪಿ. ಹೇಳಿದ್ದಾರೆ.

ಈ ಕಾರ್ಯಕ್ರಮಕ್ಕೆ ಕೆಮ್ಮಲೆ ಗ್ರೂಪ್, ಮದರ್ ಕೇರ್ ಉಡುಪಿ, ಫಿಶ್ ಫ್ಯಾಕ್ಟರಿ, ಗ್ಯಾಲಕ್ಸಿ ಸ್ಪೋರ್ಟ್ಸ್, ಗೀತಾಂಜಲಿ ಸಿಲ್ಕ್ಸ್ ಉಡುಪಿ, ಸದ್ಗುರು ಆಯುರ್ವೇದ, ಬೇಕ್ ಸ್ಟುಡಿಯೋ ‘ಉಡುಪಿ ಟೈಮ್ಸ್’ ಜೊತೆ ಪ್ರಾಯೋಜಕರಾಗಿ ಸಹಕರಿಸಿದ್ದಾರೆ.

ವಿಜೇತರಿಗೆ ಅ.19 ರಂದು ಬಹುಮಾನಗಳನ್ನು ವಿತರಿಸಲಾಗುವುದು. ಈ ಬಗ್ಗೆ ವಿಜೇತರಿಗೆ ದೂರವಾಣಿ ಮುಖಾoತರ ಮಾಹಿತಿ ನೀಡಲಾಗುವುದು.

1 thought on “ಉಡುಪಿ ಟೈಮ್ಸ್, ಕೆಮ್ಮಲೆ ಮುದ್ದುಕೃಷ್ಣ ಹಾಗು ಕೃಷ್ಣ ಬಲ ಚೈತನ್ಯ ಸ್ಪರ್ಧೆಯ ಫಲಿತಾಂಶ

Leave a Reply

Your email address will not be published. Required fields are marked *

error: Content is protected !!