ಉಡುಪಿ: ಶ್ರೀರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ‘ಶ್ರೀರಾಮೋತ್ಸವ’ ಜಿಲ್ಲಾ ಮಟ್ಟದ ಮುದ್ದು ರಾಮ ಸ್ಪರ್ಧೆ
ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ ಹಾಗೂ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಮಹಿಳಾ ಘಟಕದ ಸಹಭಾಗಿತ್ವದಲ್ಲಿ ಕೊಡವೂರಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಪ್ರಯುಕ್ತ ‘ಶ್ರೀರಾಮೋತ್ಸವ’ ಜಿಲ್ಲಾ ಮಟ್ಟದ ಮುದ್ದು ರಾಮ ಸ್ಪರ್ಧೆ ಜನವರಿ 21ರಂದು ಬೆಳಗ್ಗೆ 9ರಿಂದ ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ, ಸಮಾಜಂನ ಉಪಾಧ್ಯಕ್ಷ ವಿಜಯ ಕೊಡವೂರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು
ಶಬರಿಮಲೆಯಲ್ಲಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಾಡುವ ‘ಹರಿವರಾಸನಂ’ ಹಾಡನ್ನು ಜಾನಕಿ ಅಮ್ಮ ಎಂಬವರು ರಚಿಸಿ 100 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಜ.15ರಂದು ಮಕರ ಸಂಕ್ರಾಂತಿಯಂದು ದೇಶಾದ್ಯಂತ 3 ಕೋಟಿ ಜನರು ಏಕ ಕಾಲದಲ್ಲಿ ಈ ಹಾಡನ್ನು ಹಾಡಲಿದ್ದಾರೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ತಿಳಿಸಿದರು. ಶಾಲಾ ಕಾಲೇಜಿನ ಮಕ್ಕಳು, ಸಂಘ ಸಂಸ್ಥೆಗಳು ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವಂತೆಯೇ ಕೊಡವೂರಿನ ಜನತೆ ತಮ್ಮ ಮನೆ, ಕಂಪೌಂಡ್ ಗೋಡೆಗೆಲ್ಲ ಶ್ರೀರಾಮ, ರಾಮಾಯಣದ ಘಟನಾವಳಿಗಳ ಚಿತ್ರವನ್ನು ಬರೆಯಲಿದ್ದಾರೆ ಎಂದು ವಿಜಯ್ ಕೊಡವೂರು ತಿಳಿಸಿದರು.