ಉಡುಪಿ: ಬೀದಿ ಬದಿ, ಮನೆ ಮನೆ ಮೀನು ಮಾರಾಟ ನಿಷೇಧ: ವಿರೋಧಿಸಿ ಸಿಪಿಐಎಂ ಮನವಿ
ಉಡುಪಿ: ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ ಉಡುಪಿ ಜಿಲ್ಲೆ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ (ಸಿಪಿಐಎಂ)ಉಡುಪಿ ತಾಲ್ಲೂಕು ಸಮಿತಿ. ನಿಯೋಗವು ಇಂದು ಉಡುಪಿ ನಗರಸಭೆ ಕಮೀಷನರ್ ಹಾಗೂ ಉಡುಪಿಯ ಅಪಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಬೀದಿ ಬದಿ ಹಾಗೂ ಮನೆ ಮನೆ ಮೀನು ಮಾರಟ ಮಾಡುವುದ್ದನ್ನು ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿಸಿದ್ದನ್ನು ವಿರೋಧಿಸಿ ಚರ್ಚೆ ನಡೆಸಿ ಮನವಿ ನೀಡಲಾಯಿತು.
ಅಪಾರ ಜಿಲ್ಲಾಧಿಕಾರಿಯವರಲ್ಲಿ ಚರ್ಚೆ ನಡೆಸಿ ಮಣಿಪಾಲ, ಪೆರಂಪಳ್ಳಿ, ಕಿನ್ನಿಮುಲ್ಕಿ, ಹಾಗೂ ಕೆಲವು ಪ್ರಮುಖ ಪ್ರದೇಶದಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣದ ಸ್ಥಳ ಗುರುತಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ನಿಯೋಗದಲ್ಲಿ ಮೀನುಗಾರರ ಸಂಘದ ಅಧ್ಯಕ್ಷರಾದ ಕೆ.ಶಂಕರ್, ಕಾರ್ಯದರ್ಶಿ ಕವಿರಾಜ್ ಎಸ್, ಸಿಪಿಐಯಂ ಪಕ್ಷದ ಕಾರ್ಯದರ್ಶಿ ಶಶಿಧರ್ ಗೋಲ್ಲ,ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಹಾಗೂ AIAWU ಜಿಲ್ಲಾ ಕಾರ್ಯ ದರ್ಶಿ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.