ಕೋಟ್ಯಂತರ ಹಿಂದುಗಳ ಭಾವನೆಗೆ ಕಾಂಗ್ರೆಸ್ನಿಂದ ಮತ್ತೆ ಧಕ್ಕೆ- ಸುನಿಲ್ ಕುಮಾರ್
ಉಡುಪಿ: ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸುವ ಮೂಲಕ ಕೋಟ್ಯಂತರ ಹಿಂದುಗಳ ಭಾವನೆಗೆ ಕಾಂಗ್ರೆಸ್ ಮತ್ತೆ ಧಕ್ಕೆ ಮಾಡಿದೆ ಎಂದು ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಭಾಗವಹಿಸದಿದ್ದರೆ ಚಿಂತೆ ಇಲ್ಲ. ಈ ಕ್ಷಣದಿಂದ ರಾಮಮಂದಿರ ಹಾಗೂ ಅಯೋಧ್ಯೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ. ಅಪೂರ್ಣ ಕಟ್ಟಡದ ಉದ್ಘಾಟನೆಗೆ ಬರುವುದಿಲ್ಲ ಎಂಬುದೊಂದು ಪಿಳ್ಳೆ ನೆವ. ನಿಮ್ಮ ಮನಸಿನಲ್ಲಿದ್ದ ರಾಮ ವಿರೋಧ, ಹಿಂದು ವಿರೋಧ ಈಗ ಮತ್ತೆ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.