ಉಡುಪಿ: ಏಡ್ಸ್ ನಿಯಂತ್ರಣ ಕುರಿತ ಮಾಹಿತಿ ಕಾರ್ಯಗಾರ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ವಿವಿಧ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಿಗೆ ಏಡ್ಸ್ ನಿಯಂತ್ರಣ ಕುರಿತು ಮಾಹಿತಿ ಕಾರ್ಯಗಾರ ಇತ್ತೀಚಿಗೆ ಜರುಗಿತು.
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ ಉದ್ಘಾಟಿಸಿದರು. ಅವರು ಮಾತನಾಡಿ ಆರೋಗ್ಯ ಪೂರ್ಣ ಸಮಾಜ ನಮ್ಮೆಲ್ಲರ ಆದ್ಯತೆ, ಹಾಗಾಗಿ ಕಾಲೇಜುಗಳಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು ನಿರಂತರವಾಗಿ ಆರೋಗ್ಯ ಇಲಾಖೆಯ ಸಹಕಾರದಿಂದ ನಡೆಯುತ್ತಾ ಬಂದಿದೆ. ಹಾಗೂ ರಾಷ್ಟ್ರೀಯ ಸೇವಾಯೋಜನೆಯ ಶಿಬಿರಗಳಲ್ಲಿಯು ನಿರಂತರವಾಗಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯುತ್ತಲೆ ಇದೆ. ಈ ಎಲ್ಲಾ ದರ ಪ್ರಯತ್ನದಿಂದ ಇತ್ತೀಚಿನ ದಿನಗಳಲ್ಲಿ ಏಡ್ಸ್ ಪ್ರಮಾಣ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಉಡುಪಿ ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಚಿದಾನಂದ ಸಂಜು ಎಸ್. ವಿ, ಅವರು ಮಾತನಾಡಿ ಏಡ್ಸ್ ಕುರಿತ ಮಾಹಿತಿ, ಸಂದೇಹಗಳನ್ನು ಯೋಜನಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಕೆಎಂಸಿ ಮಣಿಪಾಲ ಆಸ್ಪತ್ರೆಯ ಪೆಥಾಲಾಜಿಸ್ಟ್ ವಿಭಾಗದ ವೈದ್ಯೆ ಡಾ.ಚೆನ್ನ ದೀಪಿಕಾ,ಉಡುಪಿ ಜಿಲ್ಲಾ ಇಲಾಖೆ ಆರೋಗ್ಯ ಕಾರ್ಯಕ್ರಮ ಮೇಲ್ವಿಚಾರಕ ಮಹಾಭಲೇಶ್ವರ ಮತ್ತಿರರು ಉಪಸ್ಥಿತರಿದ್ದರು.