ಪುತ್ತಿಗೆ ಪರ್ಯಾಯ ಮಹೋತ್ಸವ: ಹೊರಕಾಣಿಕೆ ಮೆರವಣಿಗೆಗೆ ಅದ್ಧೂರಿ ಚಾಲನೆ
ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಹೊರಕಾಣಿಕೆ ಮೆರವಣಿಗೆಗೆ ಉಡುಪಿ ಸಂಸ್ಕೃತ ಕಾಲೇಜಿನ ಬಳಿ ಇಂದು ಚಾಲನೆ ನೀಡಲಾಯಿತು.
ಮಠದ ದಿವಾನ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್, ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಸಾಂಪ್ರದಾಯಿಕ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಸಂಸ್ಕೃತಿ ಕಾಲೇಜಿನ ಬಳಿಯಿಂದ ಆರಂಭಗೊಂಡ ಮೆರವಣಿಗೆ ರಥಬೀದಿಯ ಮೂಲಕ ಪುತ್ತಿಗೆ ಮಠಕ್ಕೆ ಸಾಗಿಬಂತು. ತಟ್ಟಿರಾಯ, ನಾಸಿಕ್ ಬ್ಯಾಂಡ್, ವಾದ್ಯ, ಸಿಡಿಮದ್ದು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು.
ಇಂದು ಸಾಂಪ್ರದಾಯಿಕ ಹೊರಕಾಣಿಕೆ ಜರುಗಿದ್ದು, ನಾಳೆಯಿಂದ ಜೋಡುಕಟ್ಟೆಯಿಂದ ಅದ್ಧೂರಿ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯಲ್ಲಿ ಹೊರಕಾಣಿಕೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ರಮೇಶ್ ಭಟ್, ರಮೇಶ್ ಶೆಟ್ಟಿ, ಮಂಜುನಾಥ್ ಉಪಾಧ್ಯ, ರವೀಂದ್ರ ಆಚಾರ್ಯ, ವಿಜಯ ರಾಘವ ರಾವ್, ರಾಮಚಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ರಘುಪತಿ ರಾವ್, ಹಯವದನ ಭಟ್, ಸತೀಶ್ ಕುಮಾರ್, ಗೌತಮ್ ಹೆಗಡೆ, ದೀಪಕ್ ಶೇಟ್, ಕಿರಣ್ ಶೇಟ್, ರುದ್ರಯ್ಯ ಆಚಾರ್ಯ, ನಳಿನ್ ಪ್ರದೀಪ್ ರಾವ್, ಸಂದೀಪ್ ಮಂಜ, ನಾಗರಾಜ ಉಪಾಧ್ಯ, ಶೋಭಾ ಉಪಾಧ್ಯಾಯ, ಜಗದೀಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.