ಆಸರೆ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿ: ಜೈಶಂಕರ್
ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿ ಎಂದು ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷ ಜೈಶಂಕರ್ ಹೇಳಿದರು.
ಅವರು ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಅವಕಾಶ ವಂಚಿತ ಮಕ್ಕಳಿಗೆ ಶೈಕ್ಷಣಿಕ ಧನಸಹಾಯದ ಚೆಕ್ ಹಸ್ತಾಂತರಿಸಿ ಕೋವಿಡ್ ನ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಅಪೇಕ್ಷಿತ ವರ್ಗದವರಿಗೆ ಊಟ, ಕಿಟ್, ಮಾಸ್ಕ ವಿತರಣೆ, ಈ ರೀತಿ ಸಾಮಾಜಿಕ ಚಟುವಟಿಕೆಗಳು ಉಡುಪಿ ಜಿಲ್ಲೆಯ ಕೋವಿಡ್ ಎದುರಿಸುವಲ್ಲಿ ಬಹಳಷ್ಟು ಸಹಕಾರಿಯಾಗಿತ್ತು ಎಂದರು.
ಇಂದುಶೈಕ್ಷಣಿಕ ಧನಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ವಿದ್ಯಾವಂತರಾಗಿ ತಾವು ಕೂಡ ಮುಂದೆ ಸಮಾಜದ ದೀನದಲಿತರಿಗೆ, ಬಡಮಕ್ಕಳಿಗೆ ಸಹಕಾರ ನೀಡುವಂತಾಗಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಉಡುಪಿಯ ಏಕೈಕ ಗೋಲಿಸೋಡ ತಯಾರಕ ಶೀನ ನಾಯ್ಕ ಇವರಿಗೆ ಗೌರವಧನ ನೀಡಿ ಸನ್ಮಾನ ಮಾಡಲಾಯಿತು. ಸಮಾರಂಭದ ಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ನಗರಸಭಾ ಸದಸ್ಯರಾದ ಗೀತಾ ದೇವರಾಯ, ರಜನಿ ಹೆಬ್ಬಾರ್ ಉಪಸ್ಥಿತರಿದ್ದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಕೋಶಧಿಕಾರಿ ಸತೀಶ್ ಕುಲಾಲ್ ಸ್ವಾಗತಿಸಿ, ಎಂ. ವಲ್ಲಭ ಭಟ್ ಧನ್ಯವಾದವಿತ್ತು ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.