ಉಡುಪಿ: ಕಳಪೆ ಮಟ್ಟದ ಡಾಮರೀಕರಣ ಆಕ್ರೋಶ- ಮರು ಕಾಮಗಾರಿಗೆ ಆದೇಶ
January 3, 2024
ಉಡುಪಿ,ಜ.3:ಪರ್ಯಾಯ ಪ್ರಯುಕ್ತ ನಗರದ ಮುಖ್ಯರಸ್ತೆಗಳಲ್ಲಿ ತೇಪೆ ಕಾರ್ಯ ನಡೆಯುತ್ತಿದ್ದು ಬಹುತೇಕ ಕಾಮಗಾರಿಗಳು ಕಳಪೆಯಾಗಿದ್ದು, ನಿನ್ನೆ ಸುರಿದ ತುಂತುರು ಮಳೆಗೆ ತೇಪೆ ಹಾಕಿದ ಜಲ್ಲಿ ಕಲ್ಲುಗಳು ಎದ್ದು ಹೋಗಿದೆಂದು ನಾಗರೀಕರು ಆರೋಪಿಸಿದ್ದಾರೆ.
ನಗರದ ತೆಂಕಪೇಟೆಯ ಮುಖ್ಯರಸ್ತೆ ಹಾಗೂ ಹಳೆ ಅಂಚೆಕಛೇರಿ ರಸ್ತೆಗಳಲ್ಲಿ ತೇಪೆ ಹಾಕುವಕಾಮಗಾರಿ ನಡೆಯುತ್ತಿದ್ದು,ಸಾರ್ವಜನಿಕರು ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರೆ.ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ನಗರಸಭೆಯ ಪೌರಾಯುಕ್ತರಾದ ರಾಯಪ್ಪ ಅವರು, ಕಾಮಗಾರಿ ಪರೀಶಿಸಿದರು. ಕಳಪೆ ಮಟ್ಟದ ತೇಪೆ ಹಾಕುವ ಕಾಮಗಾರಿಯೆಂದು ಧೃಡಿಕರಿಸಿದ ಪೌರಾಯುಕ್ತರು, ಮರು ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಆದೇಶವಿತ್ತರು.
ಸಾರ್ವಜನಿಕ ರಸ್ತೆಗಳ ಕಾಮಗಾರಿಗಳು ಸಾರ್ವಜನಿಕರ ಕರದ ಹಣದಿಂದಲೇ ನಡೆಯುತ್ತಿರುವುದು. ಕಾಮಗಾರಿಯ ಉಸ್ತುವಾರಿ ಹೊತ್ತವರು ದನದಾಹದಿಂದ ಸಾರ್ವಜನಿಕರ ಹಣವನ್ನು ನುಂಗುವುದು ಸರಿಯಲ್ಲ. ಮೇಲಾಧಿಕಾರಿಗಳು ಕಾಮಗಾರಿಯ ಸ್ಥಳದಲ್ಲಿ ಗಸ್ತು ಇರಬೇಕು,ಕಾಮಗಾರಿಯ ಗುಣಮಟ್ಟದ ಪರೀಶಿಲನೆ ನಡೆಸುತ್ತಿರಬೇಕು.ಆಗ ಮಾತ್ರ ಸಾರ್ವಜನಿಕರ ಹಣವನ್ನು ಪೋಲಾಗುವುದನ್ನು ತಪ್ಪಿಸಬಹುದು.ಉತ್ತಮ ಗುಣಮಟ್ಟದ ಬಾಳಿಕೆಯ ರಸ್ತೆಗಳ ನಿರ್ಮಾಣ ಸಾಧ್ಯವೆಂದು ಕಳಪೆಮಟ್ಟದ ಕಾಮಗಾರಿಯ ಕಂಡು ಮಾಜಿ ನಗರಸಭೆಯ ಸದಸ್ಯ ನಿತ್ಯಾನಂದ ಒಳಕಾಡುವರು ಹೇಳಿದರು.