ಉಡುಪಿ ಸೀರೆಗಳ ಉತ್ಪಾದನೆ- ಸ್ವ ಉದ್ಯೋಗಕ್ಕೆ ನೇರ ಸಂದರ್ಶನದ ಮೂಲಕ ನೇಮಕಾತಿ
ಉಡುಪಿ: ಜಿಐ ಟ್ಯಾಗ್ ಹೊಂದಿರುವ ಜನಪ್ರಿಯ ಉಡುಪಿ ಸೀರೆಗಳ ಉತ್ಪಾದನೆಗಾಗಿ 6 ತಿಂಗಳ ತರಬೇತಿ ಮತ್ತು ಉದ್ಯೋಗಕ್ಕೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ.
ತರಬೇತಿಗೆ ಮಾಸಿಕ ತಲಾ ರೂ. 8,000 ತರಬೇತಿ ವೇತನ ಮತ್ತು ಉಪಹಾರ ನೀಡಲಾಗುವುದು.
ತರಬೇತಿಯ ಬಳಿಕ ಮಾಸಿಕ ತಲಾ ರೂ.15,000 ಹಾಗೂ ನೈಪುಣ್ಯತೆ ಪಡೆದಂತೆ ಮಾಸಿಕ ತಲಾ 25,000 ಕ್ಕೂ ಮೇಲ್ಪಟ್ಟು ಸಂಪಾದನೆ ಮಾಡುವ ಅವಕಾಶ.
ನೇರ ಸಂದರ್ಶನದ: ಜ.5 ರ ಶುಕ್ರವಾರ, ಬೆಳಗ್ಗೆ 10:30ರಿಂದ. ಸ್ಥಳ: ಉಡುಪಿ ಜಿಲ್ಲಾ ಪಂಚಾಯತ್ ಕಟ್ಟಡ (ಬನ್ನಂಜೆ) ತಳ ಅಂತಸ್ತಿನ ಕೈಮಗ್ಗ ಕೇಂದ್ರದಲ್ಲಿ.
ಮಹಿಳೆಯರಿಗೆ ಮತ್ತು ನೇಕಾರಿಕೆ ಹಿನ್ನೆಲೆ ಇರುವವರಿಗೆ ಮೊದಲ ಆದ್ಯತೆ. ಸಂದರ್ಶನಕ್ಕೆ ಬರುವಾಗ ವಿದ್ಯಾರ್ಹತೆ ದಾಖಲೆ, ಆಧಾರ್ ಕಾರ್ಡ್, ಫೋಟೋ ತರಬೇಕು. ಸಂಪರ್ಕ: 9844993565