ಕಾರ್ಕಳ: ಕ್ರಶರ್ ಮಾಲೀಕ ಮತ್ತು ಗುತ್ತಿಗೆದಾರನ ಮನೆಗೆ ಐಟಿ ಶಾಕ್!
ಕಾರ್ಕಳ: ಇಂದು ಬೆಳ್ಳಂಬೆಳಗ್ಗೆ ಕಾರ್ಕಳದ ಕ್ರಶರ್ ಹಾಗೂ ಫ್ಲಾಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗುತ್ತಿಗೆದಾರ ಸುಜಯ ಶೆಟ್ಟಿ ಹಾಗೂ ಕ್ರಶರ್ ಮಾಲಕ ದಿನೇಶ್ ಶೆಟ್ಟಿ ಎಂಬವರ ಮನೆ ಹಾಗೂ ಕ್ರಶರ್ ಘಟಕಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದಾರೆ.
ಮುಂಜಾನೆಯಿಂದಲೇ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು ತೆರಿಗೆ ವಂಚನೆ ಕುರಿತು ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.