ಮಣಿಪಾಲ: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಆಂಬುಲೆನ್ಸ್
ಮಣಿಪಾಲ: ಮಣಿಪಾಲದಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ಬರುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಜನೌಷಧಿ ಕೇಂದ್ರಕ್ಕೆ ನುಗ್ಗಿದ ಘಟನೆ ಲಕ್ಷ್ಮೀಂದ್ರ ನಗರದ ಬಳಿ ಕಳೆದ ರಾತ್ರಿ ನಡೆದಿದೆ.
ಆಂಬುಲೆನ್ಸ್ ನಲ್ಲಿ ಚಾಲಕನ ಮಾತ್ರ ಇದ್ದು, ಲಕ್ಷ್ಮೀಂದ್ರ ನಗರದ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಇದರಿಂದ ಒಮ್ಮೆಗೆ ಬಲಕ್ಕೆ ತಿರುಗಿದ ಆಂಬುಲೆನ್ಸ್, ರಸ್ತೆಯ ಪಕ್ಕದಲ್ಲಿದ್ದ ಜನೌಷಧಿ ಕೇಂದ್ರದೊಳಗೆ ನುಗ್ಗಿದೆ. ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.