ಸವಿತಾ ಸಮಾಜ ವಿವಿಧೋದ್ದೇಶ ಸೌ.ಸ. ಸಂಘ- ಸೌಹಾರ್ದ ಸಹಕಾರಿ ದಿನಾಚರಣೆ
ಉಡುಪಿ: ಸೌಹಾರ್ದ ಸಹಕಾರಿ ದಿನಾಚರಣೆಯ ಪ್ರಯುಕ್ತ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಂಬಲ್ಪಾಡಿ ವತಿಯಿಂದ ನೇಜಾರಿನ ಸ್ಪಂದನಾ ದಿವ್ಯಾoಗರ ಸಂರಕ್ಷಣೆ ಕೇಂದ್ರಕ್ಕೆ ಒಂದು ಕಪಾಟು ನೀಡಿ, ದಿವ್ಯಾoಗರೊಂದಿಗೆ ಉಪಹಾರ ಮಾಡುವುದರ ಮೂಲಕ ಸೌಹಾರ್ದ ಸಹಕಾರಿ ದಿನಾಚರಣೆ ಮತ್ತು ಹೊಸ ವರ್ಷಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ಅಧ್ಯಕ್ಷರಾದ ನವೀನ್ ಚಂದ್ರ ಭಂಡಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ನಿರ್ದೇಶಕರಾದ ಸದಾಶಿವ ಬಂಗೇರ, ಶೇಖರ್ ಸಾಲಿಯನ್, ರಾಜು ಸಿ ಭಂಡಾರಿ, ಉಪನಿರ್ದೇಶಕರಾದ ಸತೀಶ್ ಸುವರ್ಣ, ಭರತ್ ಸುವರ್ಣ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.