ಪರ್ಕಳ: ಯಕ್ಷಗಾನ ಬಯಲಾಟ ತಡೆದ ವಿಘ್ನ ಸಂತೋಷಿಗಳು…!
ಪರ್ಕಳ: ಇಲ್ಲಿನ ವಿಘ್ನೇಶ್ವರ ಸಭಾಭವನದ ಎದುರು ಹಟ್ಟಿಯಂಗಡಿಯ ಯಕ್ಷಗಾನ ಕಲಾಮಂಡಳಿಯ ಬಯಲಾಟವು ಸಭಾಭವನದ ಹೊರಗಡೆ ಬಯಲಾಟ ಚೌಕಿಯನ್ನು ಡಿ.28ರಂದು ಆಯೋಜಿಸಲಾಗಿತ್ತು.
ಸಭಾಭವನದ ಎದುರುಗಡೆ ರಂಗಸ್ಥಳ ನಿರ್ಮಾಣ ಮಾಡಿ ಇನ್ನೇನು ಯಕ್ಷಗಾನ ಪ್ರಾರಂಭವಾಗ ಬೇಕಿತ್ತು. ಅಷ್ಟರಲ್ಲಿಯೇ ಕಟ್ಟಡ ಸಮಿತಿಯ ಕೆಲವೊಬ್ಬರು ಯಕ್ಷಗಾನ ನಡೆಯದಂತೆ ತಡೆಒಡ್ಡಿದ್ದಾರೆ.ಬಯಲಾಟದ ಯಕ್ಷಗಾನದ ಗಣಪತಿಯ ವಿಗ್ರಹಪೂಜೆ ಕೂಡ ಸಭಾಭವನದ ಎದುರು ನಡೆದಿತ್ತು ಎನ್ನಲಾಗಿದೆ. ಅಷ್ಟರಲ್ಲಿ ಯಕ್ಷಗಾನ ಪ್ರಾರಂಭ ಮಾಡಲು ತಡೆವೊಡ್ಡಿದ್ದಾರೆ.
ಕಾಲಮಿತಿ ಯಕ್ಷಗಾನ ಇದಾಗಿದ್ದು, ಬಯಲಾಟ ಯಕ್ಷಗಾನ ಡಿ. 28 ರಂದು ನಡೆಯದೆ. ಕಲಾವಿದರು, ಚೌಕಿಯಲ್ಲಿರುವ ಗಣಪತಿ ದೇವರು, ಕೂಡ ಹೊರಗಡೆಯೆ ಇರುವ ಪರಿಸ್ಥಿತಿ ಒದಗಿಬಂದಿದೆ ಕಲಾವಿಧರಿಗೂ ತೊಂದರೆಯಾಯಿತು.
ಸುದ್ದಿ ತಿಳಿದ ಸ್ಥಳೀಯ ಯಕ್ಷಗಾನಪ್ರೇಮಿಗಳು ಮರುದಿನ ಸ್ಥಳೀಯರು ಸೇರಿಕೊಂಡು ಭಾಗದಲ್ಲಿ ಯಕ್ಷಗಾನ ಪ್ರದರ್ಶನ ನಡೆಯೆದೆ ಇರುವುದನ್ನು ಬೇಸತ್ತು. ಡಿ.29ರಂದು ಪರ್ಕಳ ಪಂಚಾಯತಿನ ಬಳಿ ಇರುವ ಶೆಣೈ ಕಂಪೌಂಡ್ನಲ್ಲಿರುವ ಎಲ್ಲರೂ ದೇಣಿಗೆ ಸಂಗ್ರಹಿಸಿ ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನ ನಡೆಸಿಕೊಟ್ಟರು ಎಂದು ತಿಳಿದುಬಂದಿದೆ.
ಸಭಾಭವನದ ಎದುರು ಚೌಕಿ ಪೂಜೆ ನಡೆದ ನಂತರ ಯಕ್ಷಗಾನ ನಡೆಯಲು ಅವಕಾಶ ನೀಡದವರ ವಿರುದ್ಧ ಕಲಾಸಕ್ತರು ತೀವ್ರ ಅಸಮಾಧಾನಗೊಂಡಿದ್ದರು. ದೂರದ ಊರಿನಿಂದ ಬಂದು ಬಯಲಾಟ ಮಾಡುವವರಿಗೆ. ಸಭಾಭವನದಲ್ಲಿ ಕಾರ್ಯಕ್ರಮ ಇಲ್ಲದಿದ್ದಾಗ ಹೊರಗಡೆಯಾದರೂ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಕಟ್ಟಡ ಸಮಿತಿಯಲ್ಲಿ ಒತ್ತಾಯಿಸಿದ್ದಾರೆ.
ಈ ಕಟ್ಟಡವು ಸಾರ್ವಜನಿಕರಿಂದ ದೇಣಿಗೆ ಪಡೆದು ನಿರ್ಮಿಸಲಾಗಿದ್ದು. ಯಕ್ಷಗಾನದಂತಹ ಗಂಡು ಕಲೆಗೆ ಹೊರಗಡೆಯಾದರು ಅವಕಾಶ ನೀಡಬೇಕು, ಸಭಾ ಭವನದಲ್ಲಿ ಸ್ಥಳಾವಕಾಶವಿದ್ದೂ, ಅವಕಾಶ ನೀಡದಿರುವುದು ಬೇಸರ ತಂದಿದೆ ಎಂದಿದ್ದಾರೆ ಸ್ಥಳೀಯರು. ಯಕ್ಷಗಾನ ಕಲಾಪ್ರಿಯರು ಸ್ಥಳೀಯರು ಕೂಡಿಕೊಂಡು ಚಂದ ಸಂಗ್ರಹಿಸಿ ಮೇಳದವರಿಗೆ ಆದ ನಷ್ಟ ಬರಿಸಿದ್ದಾರೆ.