ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾಗಿ ರೋಬರ್ಟ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಪ್ರಭಾವಿ ಸಂಘಟನೆಯಾದ ಕೆಥೊಲಿಕ್ ಸಭಾ ಇದರ 2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾರ್ಕಳ ವಲಯದ ಕಣಜಾರು ಧರ್ಮಕೇಂದ್ರದ ರೊಬರ್ಟ್ ಮಿನೇಜಸ್ ಆಯ್ಕೆಯಾಗಿದ್ದಾರೆ.
ಉಡುಪಿಯ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ರೋಬರ್ಟ್ ಮಿನೇಜಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ : ಆಲ್ವಿನ್ ಕ್ವಾಡ್ರಸ್ ಕೋಟ, ನಿಯೋಜಿತ ಅಧ್ಯಕ್ಷರಾಗಿ ಮೇರಿ ಡಿಸೋಜಾ, ಉದ್ಯಾವರ, ಉಪಾಧ್ಯಕ್ಷರಾಗಿ ರೊನಾಲ್ಡ್ ಆಲ್ಮೇಡಾ ಉದ್ಯಾವರ, ಕಾರ್ಯದರ್ಶಿಯಾಗಿ ಸಂತೋಶ್ ಕರ್ನೆಲಿಯೋ ಮೌಂಟ್ ರೋಸರಿ ಕಲ್ಯಾಣಪುರ, ಸಹ ಕಾರ್ಯದರ್ಶಿಯಾಗಿ ಗ್ರೆಗರಿ ಪಿಕೆ ಡಿಸೋಜಾ ಶಂಕರಪುರ, ಕೋಶಾಧಿಕಾರಿಯಾಗಿ ಜೆರಾಲ್ಡ್ ರೊಡ್ರಿಗಸ್ ಶಿರ್ವಾ, ಸಹಾಯಕ ಕೋಶಾಧಿಕಾರಿಯಾಗಿ ಹೆರಿಕ್ ಗೊನ್ಸಾಲ್ವಿಸ್ ಗಂಗೊಳ್ಳಿ, ಆಂತರಿಕ ಲೆಕ್ಕಪರಿಶೋಧಕರಾಗಿ ಎಡ್ವರ್ಡ್ ಲಾರ್ಸನ್ ಡಿಸೋಜಾ ಪೇತ್ರಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯನ್ನು ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್ ಮತ್ತು ವಾಲ್ಟರ್ ಸಿರಿಲ್ ಪಿಂಟೊ ನಡೆಸಿಕೊಟ್ಟರು.
Congratulations Bab Robert, Bab Santosh and the whole new team. Bab Robert may the laity organisation grow strong under your leadership. Bab Alwyn your term as President was eventful & successful.