ಬ್ರಹ್ಮಾವರ: ಛಾಯಾಗ್ರಾಹಕ ಗಣೇಶ್ ಶೆಟ್ಟಿ ಇನ್ನಿಲ್ಲ

ಬ್ರಹ್ಮಾವರ: ಹಾವಂಜೆ ಗ್ರಾಮದ ಕೀಳಂಜೆಯ ನಿವಾಸಿ, ಉಡುಪಿ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಸಹೋದರಾದ ಗಣೇಶ್ ಶೆಟ್ಟಿ(46) ಕೀಳಂಜೆಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಮೃತರು ಪತ್ನಿ ಮತ್ತು ರಾಷ್ಟೀಯ ಕರಾಟೆ ಪ್ರಶಸ್ತಿ ಪುರಸ್ಕೃತೆಯಾದ ರಿಯಾ ಜಿ. ಶೆಟ್ಟಿಯವರನ್ನು ಅಗಲಿದ್ದಾರೆ. ಛಾಯಾಗ್ರಾಹಕರಾಗಿ ಸ್ಥಳೀಯ ‌ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಬನ್ನಂಜೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!