ಬ್ರಹ್ಮಾವರ: ಸೇವಾ ಸಿಂಧು ಕಛೇರಿಗೆ ನುಗ್ಗಿದ ಖಾಸಗಿ ಬಸ್

ಬ್ರಹ್ಮಾವರ: (ಉಡುಪಿ ಟೈಮ್ಸ್ ವರದಿ)ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇವಾಸಿಂಧು ಕಚೇರಿಯೊಳಗೆ ನುಗ್ಗಿದ ಘಟನೆ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ರವಿವಾರ ನಡೆದಿದೆ.

ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಾಸಗಿ ಬಸ್ ಸ್ಟಾರ್ಟ್ ಆಗದ ಕಾರಣ ಬೇರೆ ಬಸ್‌ನ ಸಿಬ್ಬಂದಿ ಮತ್ತು ಸಾರ್ವಜನಿಕರು ಹಿಂದಿನಿಂದ ದೂಡಿ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರು. ಇಳಿಜಾರಿದ್ದ ಕಾರಣ ಬಸ್ ಸ್ವಲ್ಪ ವೇಗವಾಗಿ ಚಲಿಸಿತ್ತು. ಈ ಸಂದರ್ಭ ಎದುರಿದ್ದ ತಾಲೂಕು ಪಂಚಾಯತ್ ಕಟ್ಟಡದ ಕಡೆಗೆ ಬಸ್ ಸಾಗಿತ್ತು.

ಆಗ ಬಸ್‌ನ ತಾಂತ್ರಿಕ ದೋಷ ಉಂಟಾಗಿ ಬ್ರೆಕ್ ಕೂಡಾ ಹಿಡಿಯದ ಕಾರಣ ಬಸ್‌ನ್ನು ನಿಯಂತ್ರಣ ಚಾಲಕನಿಗೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ವೇಗವಾಗಿ ಬಂದ ಬಸ್ ಸೇವಾ ಸಿಂಧು ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಭಾನುವಾರವಾದ್ದರಿಂದ ಸೇವಾ ಸಿಂಧು ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಸಂಭವನೀಯ ಅನಾಹುತವೊಂದು ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!