ಪೆರಂಪಳ್ಳಿ ವಾರ್ಡಿನ ಉಪಚುನಾವಣೆ – ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಜಯಶಾಲಿ
ಉಡುಪಿ: ಡಿ.27 ರಂದು ನಡೆದ ಉಡುಪಿ ನಗರ ಸಭೆಯ ಮೂಡು ಪೆರಂಪಳ್ಳಿ ವಾರ್ಡಿನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಅವರು ಆರು ಮತದ ಅಂತರದಿಂದ ಗೆದ್ದು ಪ್ರಥಮ ಬಾರಿಗೆ ನಗರ ಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿಂಡ ಅವರು ಕಾಂಗ್ರೆಸ್ನ ಶ್ರುತಿ ಅವರನ್ನು ಆರು ಮತಗಳಿಂದ ಸೋಲಿಸಿದ್ದು, ಉಡುಪಿ ನಗರ ಸಭೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳಿಂದ ಮೂರು ಸ್ಥಾನಕ್ಕೆ ತಳ್ಳಲ್ಪಟಿದೆ.