ಉಡುಪಿ ಜಯಂಟ್ಸ್ ಗ್ರೂಪ್: ಫೆಡ್ಕಾನ್ – 2023 ಮತ್ತು ಮಾಜಿ ಅಧ್ಯಕ್ಷರುಗಳ ಸಮ್ಮಿಲನ
ಉಡುಪಿ: ಉಡುಪಿಯ ಜಯಂಟ್ಸ್ ಗ್ರೂಪ್ ವತಿಯಿಂದ ಫೆಡ್ಕಾನ್ -2023 ಮತ್ತು ಮಾಜಿ ಅಧ್ಯಕ್ಷರುಗಳ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು.
ಡಿ.23ರಂದು ಅಂಬಲಪಾಡಿ ಹೋಟೆಲ್ ಕಾರ್ತಿಕ್ ಎಸ್ಟೇಟ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ನ ಕೇಂದ್ರ ಸಮಿತಿ ಸದಸ್ಯ ದಿನಕರ್ ಕೆ. ಅಮೀನ್ ಮಾತನಾಡಿದರು. ಅಧ್ಯಕ್ಷತೆಯನ್ನು ಫೆಡರೇಶನ್ ಅಧ್ಯಕ್ಷೆ ತಾರಾದೇವಿ ವಾಲಿ ವಹಿಸಿದ್ದರು.
ಡಿ.24ರಂದು ಅಜ್ಜರಕಾಡು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಪೊರೇಟ್ ತರಬೇತುದಾರ ಡಾ.ಸುಧೀರ್ ರಾಜ್ ದಿಕ್ಸೂಚಿ ಭಾಷಣ ಮಾಡಿದರು. ದಯಾನಂದ ಶೆಟ್ಟಿ ಸುನಾ ಮಾಸ್ತರ್ ಯೋಗಪ್ರದರ್ಶನ ನೀಡಿದರು.
ಸಂಘದ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ಸ್ವಾಗತಿಸಿದರು. ರೋಶನ್ ಬಲ್ಲಾಳ್ ವಂದಿಸಿದರು. ಎರಡು ದಿನಗಳ ಸಮಾವೇಶದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.