ಪೆರ್ಡೂರು: ಪ್ರಸಾದ್ ನೇತ್ರಾಲಯ ವತಿಯಿ0ದ ನೇತ್ರಉಚಿತ ತಪಾಸಣಾ ಶಿಬಿರ
ಪೆರ್ಡೂರು: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಪೆರ್ಡೂರು, ಕೃಷ್ಣಾ ಕ್ಲಿನಿಕ್ ಪೆರ್ಡೂರು, ಜಿಲ್ಲಾ ಅ0ಧತ್ವ ನಿಯ0ತ್ರಣ ವಿಭಾಗ ಇವರ ಜ0ಟಿ ಆಶ್ರಯದಲ್ಲಿ ಪೆರ್ಡೂರು ಮಾ0ಗಲ್ಯ ಸಭಾ ಭವನದಲ್ಲಿ ನೇತ್ರ ಉಚಿತ ತಪಾಸಣೆ ಮತ್ತು ಪೊರೆ ಚಿಕಿತ್ಸಾ ಶಿಬಿರ ಡಿ. 23 ರ0ದು ನಡೆಯಿತು.
ಶಿಬಿರವನ್ನು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ, ನೇತ್ರ ತಜ್ಞ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು ರವರು ದೀಪ ಬೆಳಗಿಸಿ ಉದ್ಘಾಟಿಸಿ, ದೈನ0ದಿನ ಚಟುವಟಿಕೆಗಳೊ0ದಿಗೆ ಕಣ್ಣಿನ ಆರೋಗ್ಯ ರಕ್ಷಣೆ ಬಗ್ಗೆ ಹಾಗೂ ಶಿಬಿರದ ಉಚಿತ ಸೌಲಭ್ಯಗಳು ಹಾಗೂ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕೃಷ್ಣಾ ಕ್ಲಿನಿಕ್ನ ವೈದ್ಯರಾದ ಡಾ.ಜಿ. ಎಸ್. ಕೆ ಭಟ್ರವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೆರ್ಡೂರು ರೋಟರಿ ಅಧ್ಯಕ್ಷ ರೋ| ಗಣಪತಿ ಪ್ರಭು ಅವರು ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಸಾದ್ ನೇತ್ರಾಲಯದ ವೈದ್ಯೆ ಡಾ.ಲಕ್ಷ್ಮಿ, ಸಾರ್ವಜನಿಕ ಸ0ಪರ್ಕಾಧಿಕಾರಿ ಮೋಹನ್ದಾಸ್ ಮತ್ತಿತರ ಸಿಬ0ದಿಗಳಿ0ದ 169 ಜನರ ನೇತ್ರತಪಾಸಣೆ ನಡೆಸಲಾಯಿತು, 30 ಜನರಿಗೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. 59 ಜನರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಯಿತು. ಕಳೆದ 20 ವರ್ಷಗಳಿ0ದ ನಿರ0ತರವಾಗಿ ಉಚಿತ ಶಿಬಿರಗಳನ್ನು ನಡೆಸುತ್ತಾ ಬ0ದಿರುವ ಡಾ. ಕೃಷ್ಣಪ್ರಸಾದ್ ಕೂಡ್ಲು ಇವರನ್ನು ರೊ| ಶಾ0ತಾರಾಮ್ ಸೂಡ ಹಾಗೂ ಶಿಬಿರ ಸ0ಘಟಕರು ಸನ್ಮಾನಿಸಿದರು.
ಯುವಕ ಮ0ಡಲದ ಅಧ್ಯಕ್ಷ ಸ0ದೀಪ್ ಶೆಟ್ಟಿ, ಗೆಳೆಯರ ಬಳಗದ ಅಧ್ಯಕ್ಷ ಸುಭಾಶ್ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಸತೀಶ್,
ಕುತ್ಯಾರು ಬೀಡು ಸತೀಶ್ ಶೆಟ್ಟಿ, ಮಾ0ಗಲ್ಯ ಸಭಾಭವನದ ರಾಜ್ಕುಮಾರ್ ಶೆಟ್ಟಿ, ಆಶಿತ್ ಶೆಟ್ಟಿ, ರೋ| ಸುರೇಶ್ ಹೆಗ್ದೆ, ರೋ|ಜಯರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರೋ|ಪ್ರಭಾಕರ್ ಭ0ಡಿ ವ0ದಿಸಿ, ರೋ ಮನೋರಮಾ ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.