ಉಡುಪಿ: ರಿಕ್ಷಾ ಚಾಲಕನಿಗೆ ಐವರಿಂದ ಹಲ್ಲೆ
ಉಡುಪಿ: ರಿಕ್ಷಾ ಚಾಲಕರೊಬ್ಬರಿಗೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಡಿ.25ರಂದು ತಡರಾತ್ರಿ ಕಲ್ಸಂಕ ಬಳಿ ನಡೆದಿದೆ.
ಹಲ್ಲೆಗೊಳಗಾದವರನ್ನು ರಿಕ್ಷಾ ಚಾಲಕ, ಪುತ್ತೂರು ಅಡ್ಕದಕಟ್ಟೆಯ ಮಂಜುನಾಥ(40) ಎಂದು ಗುರುತಿಸಲಾಗಿದೆ. ಇವರು ರಿಕ್ಷಾ ಚಲಾಯಿಸಿಕೊಂಡು ಬರುತ್ತಿರುವಾಗ ರಸ್ತೆ ಬದಿ ಎರಡು ಬೈಕ್ 5 ಮಂದಿ ಯುವಕರು ಬಾಟಲಿ ಯನ್ನು ರಸ್ತೆಯ ಮೇಲೆ ಬಿಸಾಡಿದ್ದರು.
ಇದನ್ನು ಪ್ರಶ್ನಿಸಿದಕ್ಕಾಗಿ ಮಂಜುನಾಥ್ ಅವರಿಗೆ ಐವರ ತಂಡ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಅವರು ಬೊಬ್ಬೆ ಹಾಕಿದಾಗ ಆರೋಪಿಗಳು ತಮ್ಮ ಎರಡು ಬೈಕಿನಲ್ಲಿ ಅಲ್ಲಿಂದ ಪರಾರಿಯಾದರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.