ರಕ್ತದಾನಿ ಶಾಂತಾರಾಮ ರವರ ಚಿಕಿತ್ಸೆಗೆ ಬೇಕಾಗಿದೆ ಸಹೃದಯಿಗಳ ನೆರವಿನ ಹಸ್ತ

ಉಡುಪಿ(ಉಡುಪಿ ಟೈಮ್ಸ್ ವರದಿ): ಅಪಘಾತ ,ಹೆರಿಗೆ ಹೀಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿರುವಾಗ ಸ್ಪಂದಿಸುವ ರಕ್ತದಾನಿ. ಅವರಿಗೆ ನೆರವು ಯಾಚಿಸಿಕೊಂಡು ಕರೆಗಳು ಬಂದಾಗ ಯಾವುದೇ ಯಾವುದೇ ಫಲಾಪೇಕ್ಷೆ ಬಯಸದೆ ತಕ್ಷಣ ಸ್ಪಂದಿಸುತ್ತಿದ್ದ ಶಾಂತರಾಮ ರವರು ಕಿಡ್ನಿ ವೈಫಲ್ಯದಿಂದ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆಯ ಹಾರ್ದಳ್ಳಿ-ಮಂಡಳ್ಳಿ ನಿವಾಸಿಯಾಗಿರುವ ಶಾಂತಾರಾಮ ರವರು , ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಜೀವನ ಸಾಗಿಸುತ್ತಿದ್ದಾರೆ. ವಾರಕ್ಕೆರಡು ಬಾರಿ ಮಣಿಪಾಲದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಬೇಕು. ತಾಯಿ, ಪತ್ನಿ ಹಾಗೂ ಮಗಳಿರುವ ಮನೆಯಲ್ಲಿ, ಇಡೀ ಕುಟುಂಬವು ಇವರೊಬ್ಬರ ಶ್ರಮದಾಯಕ ದುಡಿಮೆಯಿಂದ ಬದುಕು ಸಾಗಿಸಿಕೊಂಡಿದ್ದರು.
ಶಾಂತಾರಾಮ ಅವರ ಚಿಕಿತ್ಸೆ, ಬದಲಿ ಕಿಡ್ನಿ ಜೋಡಣೆಗೆ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ದೊಡ್ಡ ಮೊತ್ತವನ್ನು ಕ್ರೂಢಿಕರಿಸಬೇಕಾಗಿದೆ ಹಾಗಾಗಿ ಜನಪ್ರತಿನಿಧಿಗಳು, ಸಮಾಜದ ಸಂಘ- ಸಂಸ್ಥೆಗಳು, ಸಹೃದಯಿ ದಾನಿಗಳು, ನಾಗರಿಕ ಸಮಾಜವು ಮಾನವಿತೆಯ ನೆಲೆಯಲ್ಲಿ ಸ್ಪಂದಿಸಿ ಧನ ಸಹಾಯ ಮಾಡಿ. ಶಾಂತರಾಮರು ಮೊದಲಿನಂತಾಗಲು ಸಹಕರಿಸಬೇಕಾಗಿ ಸಮಾಜ ಸೇವಕ ತಾರಾನಾಥ ಮೇಸ್ತ ಶಿರೂರು ರವರು ಕೋರಿಕೊಂಡಿದ್ದಾರೆ.

Phone Pay:-7996729561
ಬ್ಯಾಂಕ್ ಖಾತೆ ವಿವರ:-Syndicate Bank, Bidkalkatte.
Name:- Shantharam
Account Number:- 01622250002856
IFSC-SYNB0000162 

Leave a Reply

Your email address will not be published. Required fields are marked *

error: Content is protected !!