ಹಥ್ರಾಸ್ ಘಟನೆ ಎಸ್ ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳ ಹುನ್ನಾರ: ಶೋಭಾ ಕರಂದ್ಲಾಜೆ ಆರೋಪ.
ಉಡುಪಿ(ಉಡುಪಿ ಟೈಮ್ಸ್ ವರದಿ) : ಹಥ್ರಾಸ್ ದಲ್ಲಿ ನಡೆದ ಘಟನೆ ಬಿ ಜೆ ಪಿ ಹಾಗೂ ಯೋಗಿ ಆದಿತ್ಯನಾಥರವರ ಹೆಸರಿಗೆ ಮಸಿ ಬಳಿಯಲು ಎಸ್ ಡಿಪಿಐ ಹಾಗು ಪಿಎಫ್ಐ ಸಂಘಟನೆಗಳು ಹುನ್ನಾರ ನಡೆಸಿ ಷಡ್ಯಂತ್ರ ರೂಪಿಸಲಾಗಿದೆ ” ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಇದರ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು, ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಹಾಗು ಎಸ್ ಡಿಪಿಐ ಹಾಗೂ ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು ಆಗ್ರಹಿಸುತ್ತೇನೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಕರ್ ಹೆಗ್ಡೆ, ನಗರ ಸಭಾ ಸದಸ್ಯರಾದ ಗಿರೀಶ್ ಎಂ ಅಂಚನ್, ಪ್ರವೀಣ್ ಗುರ್ಮೆ ಉಪಸ್ಥಿತರಿದ್ದರು .