ಕೊರೊನವನ್ನೂ ಸಮರ್ಥವಾಗಿ ಎದುರಿಸಿದ ಪ್ರಧಾನಿ ಮೋದಿ : ಶೋಭಾ ಕರಂದ್ಲಾಜೆ

ಉಡುಪಿ(ಉಡುಪಿ ಟೈಮ್ಸ್ ವರದಿ): ರೈತರ ಹೊಸ ಕಾಯಿದೆ ಬಗ್ಗೆ ಮಾತನಾಡುವವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಗೆ ಈ ಕಾಯಿದೆಯ ಬಗ್ಗೆ ಸಮರ್ಪಕವಾಗಿ ತಿಳಿದಿಲ್ಲ, ಅದರಲ್ಲಿ ತಿದ್ದುಪಡಿ ಮಾಡಿರುವುದರ ಕುರಿತು ಸಮಗ್ರವಾಗಿ ತಿಳಿದಿಲ್ಲ, ಆದ್ದರಿಂದ ಇವರು ರೈತರ ದಾರಿ ತಪ್ಪಿಸುತ್ತಿದ್ದಾರೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಪುರಭವನದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯನ್ನ ಉದ್ಘಾಟಿಸಿ ಮಾತನಾಡಿದ ಅವರು ಬೇರೆ ದೇಶಗಳ ಪ್ರಕಾರ ಕೋವಿಡ್ ಭಾರತದಲ್ಲಿ ಅತಿ ಹೆಚ್ಚು ಸಾವನ್ನು ಸಂಭವಿಸಬಹುದು ಎನ್ನುವ ಕಲ್ಪನೆಯಲ್ಲಿದ್ದರು. ಆದರೆ ಪ್ರಧಾನಿ ಮೋದಿಯವರ ದಕ್ಷ ಆಡಳಿತದಿಂದ ಹಾಗೆ ಆಗಿಲ, ಲಾಕ್ ಡೌನ್ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಿ ಜೀವನ ಕಟ್ಟಿಕೊಳ್ಳಬಹುದು ಎಂಬ ವಾಕ್ಯದೊಂದಿಗೆ ಅತೀಹೆಚ್ಚು ಸಾವು ನೋವುಗಳನ್ನು ತಡೆಯುವಲ್ಲಿ ಯಶಸ್ವಿಯಾದರು.


ನಮಗೆ ೧೯೪೭ ರಲ್ಲಿ ಸ್ವಂತಂತ್ರ್ಯ ಬಂದಿದೆ, ಆದರೆ ರೈತರಿಗೆ ಮಾತ್ರ ಇನ್ನು ಸ್ವಂತಂತ್ರ್ಯ ಬಂದಿಲ್ಲ. ರೈತರ ಸಮಸ್ಯೆ ನಿವಾರಣೆಗಾಗಿ ಹೊಸ ಮಸೂದೆಯನ್ನ ಬಿ ಜೆ ಪಿ ಸರ್ಕಾರ ನೀಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಈ ಮದ್ಯೆ ೩೭೦ ಕಾಯ್ದೆ ರದ್ದು ಪಡಿಸಿ ಸೈನಿಕರಿಗೆ ಗಡಿಯಲ್ಲಿ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಸ್ವಂತತ್ರ ನೀಡಿದರು, ತ್ರಿಪಾಲ್ ತಲಾಕ್ ರದ್ದಾಗಿರುವುದು, ರಾಮ ಮಂದಿರ ಶಂಕು ಸ್ಥಾಪನೆ ಇದೆಲ್ಲ ಮೋದಿ ಸರಕಾರದ ಸಾಧನೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಮಂಗಳೂರು ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಪ್ರಸಾದ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಕರ್ ಹೆಗ್ಡೆ, ಕುತ್ಯಾರು ನವೀನ ಶೆಟ್ಟಿ, ಮನೋಹರ್ ಎಸ್ ಕಲ್ಮಾಡಿ, ಗೋಪಾಲ್ ಕೃಷ್ಣ ಹೇರ್ಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಗಲಿದ ಬಿ ಜೆ ಪಿ ಮುಖಂಡರಿಗೆ, ಹಾಗು ಮೀನುಗಾರರಿಗೆ
ಶ್ರದ್ಧಾಂಜಲಿ ಅರ್ಪಿಸಲಾಯಿತು

Leave a Reply

Your email address will not be published. Required fields are marked *

error: Content is protected !!