ಕುಂದಾಪುರ: 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಕುಂದಾಪುರ: ಏಳನೇ ತರಗತಿ ಓದುತ್ತಿದ್ದ ಬಾಲಕಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ಕುಂದಾಪುರದ ಕಟ್ಕೆರೆ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ರಾಜಶೇಖರ ಎನ್ನುವರ ಪುತ್ರಿ ರಿಷಿತಾ (13) ಮೃತ ವಿದ್ಯಾರ್ಥಿನಿ.
ಘಟನೆ ವಿವರ: 2023 ಸೆಪ್ಟೆಂಬರ್ ತಿಂಗಳಿನಿಂದ ಮಾನಸಿಕ ಖಿನ್ನತೆ ಸಲುವಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಈಕೆ ಡಿ.20 ರಂದು ಸಂಜೆ ಶಾಲೆಯಿಂದ ಬಂದವಳು ಮನೆಯ ಸಮೀಪದ ಬಾವಿಗೆ ಹಾರಿದ್ದಾಳೆ. ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.