ಶಿರ್ವ: ಹಿರಿಯ ಕಾಂಗ್ರೆಸ್ ಮುಖಂಡ ಇಗ್ನೇಷಿಯಸ್ ಡಿಸೋಜಾ ಇನ್ನಿಲ್ಲ
ಶಿರ್ವ: ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ, ಕೃಷಿಕರಾದ ಇಗ್ನೇಷಿಯಸ್ ಡಿಸೋಜಾ(71) ಅಲ್ಪಕಾಲದ ಅಸೌಖ್ಯದಿಂದ ಇದ್ದ ಇವರು ಇಂದು ನಿಧನರಾಗಿದ್ದಾರೆ.
ಶಿರ್ವ ಮಂಡಲ ಪ್ರಧಾನರಾಗಿದ್ದ ಇವರು, ಬಳಿಕ ತಾಲೂಕು ಪಂಚಾಯತ್ನ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇವರು ಉಡುಪಿ ಧರ್ಮ ಪ್ರಾಂತ್ಯದ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕ ವo. ಫಾ. ಸ್ಟೀವನ್ ಡಿಸೋಜ, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ, ವಕೀಲ ಮೆಲ್ವಿನ್ ಡಿಸೋಜ ಸಹಿತ ಆರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.