ಕೋಳಿ ಅಂಕಕ್ಕೆ ದಾಳಿ-ಬಿಜೆಪಿ ಬೆಂಬಲಿತ ಗ್ರಾ. ಪಂ. ಸದಸ್ಯ ಸಹಿತ 11 ಮಂದಿ ವಶಕ್ಕೆ
ಮಣಿಪಾಲ: ಹಿರೆಬೆಟ್ಟು ಕಬ್ಯಾಡಿ ಕಂಬಳ ಗದ್ದೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದ ಘಟನೆ ಸೋಮವಾರ ಸಂಜೆ ನಡೆದಿದೆ.
80 ಗ್ರಾಮ ಪಂಚಾಯತ್ನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶುಭಕರ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ಮಣಿಪಾಲ ಎಸ್ಐ ರಾಘವೇಂದ್ರ ಸಿ. ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿಯಲ್ಲಿ ಪಂಚಾಯತ್ ಸದಸ್ಯ ಶುಭಕರ್ ಶೆಟ್ಟಿ ಆತ್ರಾಡಿ, ರಾಕೇಶ್ ಶೆಟ್ಟಿ ಕುಕ್ಕುದಕಟ್ಟೆ, ಉಮೇಶ್ ಕಬ್ಯಾಡಿ, ವಿಘ್ನೇಶ್ ಕಬ್ಯಾಡಿ, ವಿವೇಕ್, ದಿನೇಶ ನಾಯ್ಕ್, ರತ್ನಾಕರ್ ಪೂಜಾರಿ ಪೆರ್ಡೂರು, ವಿಠಲ್ ನಾಯ್ಕ್ ಕಾಜರಗುತ್ತು, ರಾಜೇಶ ನಾಯ್ಕ್ ನೆಲ್ಲಿಕಟ್ಟೆ, ಜಯ ಶೆಟ್ಟಿ ಹಿರೆಬೆಟ್ಟು ಹಾಗೂ ಸುಂದರ 80ಬಡಗುಬೆಟ್ಟು ಎಂಬವರನ್ನು ಬಂಧಿಸಿದ್ದಾರೆ.
ದಾಳಿ ಸಂದರ್ಭದಲ್ಲಿ 5450 ರೂ.ಮೌಲ್ಯದ ಹತ್ತು ಹುಂಜ, 2800 ರೂ.ನಗದು ವಶಪಡಿಸಿಕೊಳ್ಳಲಾಗಿದೆ.