ಕೆಮ್ಮಣ್ಣು: ‘ಬಲೀಂದ್ರ ಬುಲ್ಸ್’ ಮಡಿಲಿಗೆ “ದೀಪಾವಳಿ ಟ್ರೋಫಿ – 2023”
ಉಡುಪಿ: ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕೆಮ್ಮಣ್ಣು, ನಿಟ್ಟೆ ಇದರ ಆಶ್ರಯದಲ್ಲಿ ವಿಶಿಷ್ಟ ಪರಿಕಲ್ಪನೆಯ ದೀಪಾವಳಿ ಟ್ರೋಫಿ – 2023 ಆರನೇ ಆವೃತ್ತಿಯ 40 ಗಜಗಳ ಕ್ರಿಕೆಟ್ ಪಂದ್ಯಾಟ ಕೆಮ್ಮಣ್ಣು ಬೀದಿಮನೆ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭದಲ್ಲಿ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಶಾಂತಾರಾಮ್ ಭಟ್, ಯುವ ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಕಾಪು ವಲಯದ ಯುವಜನ ಸೇವೆ ಹಾಗೂ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ ಸೂಡಾ, ಕಾರ್ಕಳ ತಾಲೂಕು ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷ ಅವಿನಾಶ್ ಶೆಟ್ಟಿ, ಬೀದಿಮನೆ ಸುರೇಶ್ ರಾವ್, ಸ್ಥಳೀಯ ಪಂಚಾಯತ್ ಪ್ರತಿನಿಧಿ ಸಂತೋಷ್ ಶೆಟ್ಟಿ, ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ವೆಂಕಟಕೃಷ್ಣ ಭಟ್, ಕ್ಲಬ್ ನ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ., ಕಾರ್ಯದರ್ಶಿ ಕೃಷ್ಣಾನಂದ ರಾವ್, ಹಾಗೂ ಕ್ರೀಡಾ ಕಾರ್ಯದರ್ಶಿ ದೀಪಕ್ ಉಪಸ್ಥಿತರಿದ್ದರು.
ವಿದ್ವಾನ್ ಪ್ರಸನ್ನ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ದೀಪಾವಳಿಯ ಹಿನ್ನೆಲೆಯನ್ನು ಒಳಗೊಂಡ'ನರಕಾಸುರ ನಟೋರಿಯಸ್','ತುಡರ್ ನೈಟ್ ರೈಡರ್ಸ್', 'ಬಲೀಂದ್ರ ಬುಲ್ಸ್' ಹಾಗೂ 'ವಾಮನ ವಾರಿಯರ್ಸ್' ಎಂಬ ನಾಮಾಂಕಿತದ ನಾಲ್ಕು ತಂಡಗಳು ಪರಸ್ಪರ ಸಹೋದರತ್ವ ಸಾರುವ ಈ ಪಂದ್ಯಾಟದಲ್ಲಿ ಸೆಣಸಾಡಿ ಸರ್ವರ ಮನ ಸೂರೆಗೊಂಡವು.
ಮುಖ್ಯ ಅತಿಥಿ ರಿತೇಶ್ ಕುಮಾರ್ ಶೆಟ್ಟಿ ಸೂಡಾ ಗ್ರಾಮೀಣ ಭಾಗದ ಸಂಸ್ಥೆ 'ದೀಪಾವಳಿ ಟ್ರೋಫಿ' ಪರಿಕಲ್ಪನೆಯಲ್ಲಿ ಆಯೋಜಿಸಿರುವ ಪಂದ್ಯಾಟದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಕ್ಲಬ್ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆ.ಸ್ವಾಗತಿಸಿದರು. ಕಾರ್ಯದರ್ಶಿ ಕೃಷ್ಣಾನಂದ ರಾವ್ ವಂದಿಸಿದರು. ಹಿರಿಯ ಸದಸ್ಯ ಸುಂದರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಕೂಟದಲ್ಲಿ ಸಾಹಿಲ್ ನೇತೃತ್ವದ'ಬಲೀಂದ್ರ ಬುಲ್ಸ್' ಪ್ರಥಮ ವಿಜಯಿ ತಂಡ ಹಾಗೂ ಶಶಿಕಾಂತ್ ಮೊಯಿಲಿ ನೇತೃತ್ವದ 'ವಾಮನ ವಾರಿಯರ್ಸ್'ದ್ವಿತೀಯ ತಂಡವಾಗಿ ಹೊರಹೊಮ್ಮಿತು.ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೊಳ್ಳ, ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಸಾಲ್ಯಾನ್, ಬೀದಿಮನೆ ಸುರೇಶ್ ರಾವ್ ಹಾಗೂ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕ್ಲಬ್ನ ಪೂರ್ವಾಧ್ಯಕ್ಷರಾದ ಡಾ. ದಿಲೀಪ್ ಕುಮಾರ್ ಕೆ,ಡಾ.ರಘುನಂದನ್, ಸುರೇಶ್ ಆಚಾರ್ಯ,ಉಪಾಧ್ಯಕ್ಷ ಸತೀಶ್ ಶೆಟ್ಟಿ, ಹಿರಿಯ ಸದಸ್ಯ ವಿಠಲಆಚಾರ್ಯ,ರೋಟರಿ ಸಮುದಾಯದಳದ ಅಧ್ಯಕ್ಷ ಪ್ರದೀಪ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಸಾಲ್ಯಾನ್,ಗಣೇಶ್ ಭಟ್,ಸುಧಾಕರ್ ಸಾಲ್ಯಾನ್,ಸುಭಾಷ್ ಹಾಗೂ ಇತರರು ಸಹಕರಿಸಿದರು.