ಉಡುಪಿ,ಡಿ.18: ಹಳೆ ಡಯಾನ ವೃತ್ತ ಸನಿಹದ ಖಾಸಗಿ ವಸತಿಗೃಹದಲ್ಲಿ ಕೊಠಡಿ ಬಾಡಿಗೆ ಪಡೆದಿದ್ದ ವ್ಯಕ್ತಿಯೊಬ್ಬರು,ಫ್ಯಾನಿಗೆ ಹೊದಿಕೆ ವಸ್ತ್ರದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ.
ಆತ್ಮಹತ್ಯೆಗೈದಿರುವ ವ್ಯಕ್ತಿಯನ್ನು ಸಿದ್ದಾಪುರದ ರಾಮಕೃಷ್ಣ ಭಟ್(40)ಎಂದು ಗುರುತಿಸಲಾಗಿದೆ. ಸಾಲಬಾಧೆ ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ.
ನಗರ ಪೋಲಿಸ್ ಠಾಣೆಯ ಎ.ಎಸ್.ಐ ಅರುಣ್ ಹಂಗಾರಕಟ್ಟೆ,ತನಿಖಾ ಸಹಾಯಕಿ ಸುಷ್ಮಾ ಘಟನಾ ಸ್ಥಳದಲ್ಲಿದ್ದು ಮಹಜರು ಪ್ರಕ್ರಿಯೆ ನಡೆಸಿದರು. ಶವ ತೆರವುಗೊಳಿಸಲು ಹಾಗೂ ಮಣಿಪಾಲದ ವೈದ್ಯಕೀಯ ಪರೀಕ್ಷಾ ಘಟಕ್ಕೆ ಶವ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.