ದುಬೈ ದಸರಾ ಕ್ರೀಡೋತ್ಸವ- ‘ನ್ಯೂ ಸ್ಟಾರ್ ಮಂಗಳೂರು’ ಕಬಡ್ಡಿ ಚಾಂಪಿಯನ್ಸ್
ದುಬೈ: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘ 6ನೇ ವರ್ಷದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.
ಇನ್ವೆಸ್ಟ್ಮೆಂಟ್ಸ್ ದುಬಾಯಿ ಪ್ರಾಯೋಜಕತ್ವದಲ್ಲಿ ಸ್ಪೋರ್ಟ್ಸ್ ಅಕಾಡೆಮಿಯಿಂದ ನಾಡಹಬ್ಬ ನಾಡಲ್ಲಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು ಡಿಸೆಂಬರ್ 10ರಂದು ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಹಲವಾರು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
384 ಚಿನ್ನ ಬೆಳ್ಳಿ ಕಂಚಿನ ಪದಕಗಳನ್ನು ಏರಿಸಿಕೊಂಡ ಕ್ರೀಡಾಪಟುಗಳು ಸಂತಸಪಟ್ಟರು ಭಾರತ ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಸಂತಸಪಟ್ಟರು. ಕಬಡ್ಡಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ನ್ಯೂ ಸ್ಟಾರ್ ಮಂಗಳೂರು ಕಬಡ್ಡಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.